ETV Bharat / sitara

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ವಿವಾದ: ಸರ್ಕಾರದ ವಿರುದ್ಧ ಸ್ಯಾಂಡಲ್​​ವುಡ್​​​ ಅಸಮಾಧಾನ! - ಶಿವರಾಜ್​ಕುಮಾರ್​​

ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಹಿನ್ನೆಯಲ್ಲಿ ಸರ್ಕಾರದ ವಿರುದ್ಧ ಸ್ಯಾಂಡಲ್​ವುಡ್​​ ನಟರು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರದ ವಿರುದ್ಧ ಸ್ಯಾಂಡಲ್​​ವುಡ್​​ ಆಕ್ರೋಶ..!

author img

By

Published : Feb 3, 2021, 4:54 PM IST

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್​​ ಅವಕಶ ಕೊಟ್ಟು ಚಿತ್ರಮಂದಿರಕ್ಕೆ ಮಾತ್ರ 50 ಪರ್ಸೆಟ್​​ ಅಕ್ಯುಪೆನ್ಸಿ ಕೊಟ್ಟಿರೋದ್ರಿಂದ ನಮಗೆ ಬಹಳ ಬೇಸರ ಆಗಿದೆ. ಬಹಳಷ್ಟು ಸಂಸಾರಗಳು ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಪರ್ಸೆಂಟ್​​ ಅಕ್ಯುಪೆನ್ಸಿ ಕೊಡಿ ಎಂದು ನಟ ಶ್ರೀ ಮುರುಳಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್ನು ನಟ ಜಗ್ಗೇಶ್​ ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಎಲ್ಲಾ ಕಡೆ ಚಿತ್ರಮಂದಿರಗಳಲ್ಲಿ ಹೌಸ್​​ ಫುಲ್​​​ಗೆ ಅವಕಾಶ ಕೊಟ್ಟಿದ್ದಾರೆ. ನೀವು ಕೂಡ ಕನ್ನಡ ಚಿತ್ರಮಂದಿರಗಳಲ್ಲಿ ನೂರು ಪರ್ಸೆಂಟ್​​ ಅಕ್ಯುಪೆನ್ಸಿಗೆ ಅವಕಾಶ ಕೊಡಿ. ಎಲ್ಲಾ ಕಡೆ ಅವೆರ್ನೆಸ್​​ ಬೆಳೆಯುತ್ತಿದೆ. ಜನರು ಎಚ್ಚರಿಕೆಯಿಂದ ಇದ್ದಾರೆ. ದಯಮಾಡಿ 100% ಅವಕಾಶ ಕೊಡಿ ಎಂದಿದ್ದಾರೆ.

  • @BSYBJP 100% ಪ್ರೇಕ್ಷಕರ ನೋಡುವಿಕೆ 50%ಗೆ ತಗ್ಗಿಸಿರುವುದು ಚಿತ್ರರಂಗಕ್ಕೆ ದೊಡ್ಡ ನಷ್ಟ..ದಯಮಾಡಿ ಆದೇಶ ಬದಲಿಸಿ ಕನ್ನಡ ಚಿತ್ರರಂಗಕ್ಕೆ ಸಹಾಯಮಾಡಿ..
    ಧನ್ಯವಾದ.. pic.twitter.com/HS4MH6iMfl

    — ನವರಸನಾಯಕ ಜಗ್ಗೇಶ್ (@Jaggesh2) February 3, 2021 " class="align-text-top noRightClick twitterSection" data=" ">

ಇನ್ನು ನಟ, ನಿರ್ದೇಶಕ ಪ್ರೇಮ್​​ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೋಟೆಲ್, ಪಾರ್ಕ್​, ಮಾರ್ಕೆಟ್​ಗಳಲ್ಲಿ ಇಲ್ದೇ ಇರೋ ನಿಯಮಗಳು ಚಿತ್ರಮಂದಿರದಲ್ಲಿ ಯಾಕೇ? ಬೇರೇ ರಾಜ್ಯದ ಸರ್ಕಾರದೋರು ಸಪೋರ್ಟ್ ಮಾಡುವಷ್ಟು ನಮ್ಮ ರಾಜ್ಯ ಸರ್ಕಾರ ಯಾಕ್ ಮಾಡಲ್ಲ? ದಯವಿಟ್ಟು 100% occupancy ಕೊಟ್ಟು ಸಿನಿಮಾಗಳನ್ನು ಬದುಕಿಸಿ, ಸಿನಿಮಾರಂಗವನ್ನು ಬೆಳೆಸಿ ಎಂದಿದ್ದಾರೆ.

  • ಹೋಟೆಲ್, ಪಾರ್ಕು, ಮಾರ್ಕೆಟ್ನಲ್ಲಿ ಇಲ್ದೇ ಇರೋಂತ ರೂಲ್ಸ್ಗಳು ಚಿತ್ರಮಂದಿರದಲ್ಲಿ ಯಾಕೇ?ಬೇರೇ ರಾಜ್ಯದ ಸರ್ಕಾರದೋರು ಸಪೋರ್ಟ್ ಮಾಡೋ ಅಷ್ಟು ನಮ್ಮ ರಾಜ್ಯ ಸರ್ಕಾರ ಯಾಕ್ ಮಾಡಲ್ಲ? ದಯವಿಟ್ಟು 100% occupancy ಕೊಟ್ಟು ಸಿನಿಮಾಗಳನ್ನ ಬದುಕಿಸಿ, ಸಿನಿಮಾರಂಗವನ್ನ ಬೆಳೆಸಿ🙏🏻 @CMofKarnataka #Ekloveya1stsongonFeb14#prems @A2Music2 pic.twitter.com/nTGXAl0n9Y

    — PREM❣️S (@directorprems) February 3, 2021 " class="align-text-top noRightClick twitterSection" data=" ">

ಕನ್ನಡದ ಖ್ಯಾತ ನಟ ಪುನೀತ್​ ಕೂಡ ಈ ಬಗ್ಗೆ ಅಭಿಪ್ರಯಾಯ ವ್ಯಕ್ತಪಡಿಸಿದ್ದು, ಖಾಸಗಿ ಕಾರ್ಯಕ್ರಮಗಳು, ಸಾರಿಗೆ, ಮಾರುಕಟ್ಟೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕಡೆ ಮುಕ್ತತೆ ಇರುವಾಗ ಚಿತ್ರಮಂದಿರಗಳಲ್ಲಿ ಈ ನಿಯಮ ಯಾಕೆ ಎಂದಿದ್ದಾರೆ.

ನಟ ಧನಂಜಯ್​​ ವಚನವನ್ನು ಉಲ್ಲೇಖ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ? ಊರೆಲ್ಲಾ ಜನಜಂಗುಳಿ ತುಂಬಿ ತುಳುಕುತಿರಲು Theater ಒಳಗೆ ಮಾತ್ರ ಕೊರೊನಾಗೆ ಅಂಜಿದೊಡೆಂತಯ್ಯ? ಎಂದು ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.