ಬಾಲನಟಿಯಾಗಿ, ನಾಯಕಿಯಾಗಿ, ಸೂಪರ್ ವುಮೆನ್ ಆಗಿ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ಮಾಲಾಶ್ರೀ ಈಗಲೂ ಯುವಜನತೆಗೆ ಅಚ್ಚುಮೆಚ್ಚು. ಸಿನಿ ಪ್ರಿಯರಿಗೆ ಆ್ಯಕ್ಷನ್ ಕ್ವೀನ್ ಎಂದೂ, ಕನಸಿನ ರಾಣಿ ಎಂದು ಚಿತ್ರರಂಗದಲ್ಲಿ ಮಿಂಚಿದ್ದ ಅವರು ಸುಮಾರು 25 ವರ್ಷಗಳ ನಂತರ ಮತ್ತೆ ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಅಲಿ ಜೊತೆಗೆ 'ಅಲಿತೋ ಸರದಾಗ' ಫನ್ನಿ ಶೋನಲ್ಲಿ ಕಾಣಿಸಿಕೊಂಡು, ಕೆಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ.
- ನೀವು ಗ್ಲಾಮರಸ್ ಹೀರೋಯಿನ್, ಆ್ಯಕ್ಷನ್ ಹೀರೋಯಿನ್ ಆಗಿ ಪರಿವರ್ತನೆ ಆಗಲು ಕಾರಣವೇನು?
ಮಾಲಾಶ್ರೀ : ನಂಜುಂಡಿ ಕಲ್ಯಾಣ ಸಿನಿಮಾದ ನಂತರ ನಿರ್ದೇಶಕರು ಮತ್ತು ನಿರ್ಮಾಪಕರು ನನಗೆ ವಿಭಿನ್ನ ಪಾತ್ರಗಳನ್ನು ನೀಡಲು ಪ್ರಾರಂಭಿಸಿದರು. ಸೋಮಶೇಖರ್ ಅವರು ಎಸ್ಪಿ ಭಾರ್ಗವಿ ಸಿನಿಮಾದಲ್ಲಿ ನನ್ನನ್ನು ಪ್ರಧಾನ ಪಾತ್ರದಲ್ಲಿಟ್ಟು ಸಿನಿಮಾ ತೆಗೆದರು. ಈ ಸಿನಿಮಾ ಸಿಲ್ವರ್ ಜ್ಯೂಬಿಲಿ ಕಂಡಿತ್ತು. ಮೊದಲಿಗೆ ಅದರಲ್ಲಿನ ಪೊಲೀಸ್ ಅಧಿಕಾರಿ ಪಾತ್ರದ ಬಗ್ಗೆ ಹೇಳಿದಾಗ ತುಂಬ ನಕ್ಕಿದ್ದೆ. ಆ ಚಿತ್ರದ ಯಶಸ್ಸಿನ ನಂತರ ನನಗೆ ಆ್ಯಕ್ಷನ್ ಇರುವ ಚಿತ್ರಗಳಲ್ಲೇ ಅವಕಾಶ ಸಿಕ್ಕಿತ್ತು. ದುರ್ಗಿ ಅತ್ಯಂತ ದೊಡ್ಡ ಹಿಟ್ ಚಿತ್ರ. ಈ ಚಿತ್ರವನ್ನು ಎನ್ಟಿಆರ್ ಅವರೊಂದಿಗೆ ಚಿತ್ರಗಳು ಬಂದವು. ದುರ್ಗಿ ದೊಡ್ಡ ಹಿಟ್.
- ಇಷ್ಟು ವರ್ಷಗಳ ಕಾಲ ತೆಲುಗು ಚಿತ್ರಗಳಿಂದ ದೂರ ಉಳಿಯಲು ಕಾರಣವೇನು?
ಮಾಲಾಶ್ರೀ : ತೆಲುಗಿನಲ್ಲಿ 'ಸಾಹಸವೀರಡು, ಸಾಗರಕನ್ಯ ಸಿನಿಮಾ' ಮಾಡಿದ ನಂತರ ನಾನು ಮದುವೆಯಾದೆ. ಮದುವೆಯಾದ ನಂತರ ನನ್ನ ಸಿನಿಮಾಗಳ ಟ್ರೆಂಡ್ ಬದಲಾಗಿತ್ತು. ಕನ್ನಡದಲ್ಲಿ ಎಲ್ಲಾ ಪವರ್ಫುಲ್ ಆ್ಯಕ್ಷನ್ ಸಿನಿಮಾಗಳನ್ನು ಮಾಡಬೇಕಾಗಿ ಬಂತು. ಆದ್ದರಿಂದ ನಾನು ತೆಲುಗಿಗೆ ಬರಲು ಸಾಧ್ಯವಾಗಲಿಲ್ಲ.
- ನಿಮ್ಮ ಮೊದಲ ಹೆಸರು ಶ್ರೀದುರ್ಗಾ, ನಿಮಗೆ ರಸಿಕಾ ಎಂದೂ ಕೂಡಾ ಹೆಸರಿಟ್ಟಿದ್ದರಂತೆ?
ಮಾಲಾಶ್ರೀ: ಹೌದು, ಮನೆಯವರು ನನಗೆ ಇಟ್ಟಿದ್ದ ಹೆಸರು ಶ್ರೀದುರ್ಗಾ ಎಂದು. ತಮಿಳಿನಲ್ಲಿ ಪಾಂಡ್ಯರಾಜನ್ ಅವರ ಜೊತೆಯಲ್ಲಿ ಮುಕ್ತಾ ಫಿಲಂಸ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ, ಮುಕ್ತಾ ಶ್ರೀನಿವಾಸ್ ಅವರು ನನಗೆ ರಸಿಕಾ ಎಂದು ಹೆಸರು ಬದಲಾವಣೆ ಮಾಡಿದ್ದರು. ಕನ್ನಡಕ್ಕೆ ಬಂದಾಗ ಪಾರ್ವತಮ್ಮ ರಾಜಕುಮಾರ್ ಅವರು ನನ್ನ ಹೆಸರನ್ನು ಮಾಲಾಶ್ರೀ ಎಂದು ಬದಲಾಯಿಸಿದರು. ಅಂದಿನಿಂದ ಮಾಲಾಶ್ರೀ ಹೆಸರನ್ನೇ ಮುಂದುವರೆಸಿದ್ದೇನೆ.
- " class="align-text-top noRightClick twitterSection" data="">
- ತೆಲುಗಿನಲ್ಲಿ ಪ್ರೇಮಕೈದಿ ಸಿನಿಮಾ ಹಿಟ್ ಆದ ನಂತರ ಗಿಫ್ಟ್ ಬಂದಿತ್ತಂತೆ..!
ಮಾಲಾಶ್ರೀ : ಹೌದು, ನನಗೆ ತೆಲುಗು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಹಿಟ್ ನೀಡಿದ ಚಿತ್ರ 'ಪ್ರೇಮಕೈದಿ'. ಈ ಚಿತ್ರದ ಚಿತ್ರೀಕರಣದ ವೇಳೆಯೇ ಸಿನಿಮಾ ಹಿಟ್ ಆದರೆ, ಭರ್ಜರಿ ಗಿಫ್ಟ್ ನೀಡುವುದಾಗಿ ನಿರ್ಮಾಪಕರಾದ ರಾಮಾನಾಯ್ಡು ಅವರು ಹೇಳಿದ್ದರು. ಚಿತ್ರ ಹಿಟ್ ಆದ ನಂತರ ನನಗೆ ಪ್ರೀಮಿಯರ್ 118 ಕಾರನ್ನು ಅವರು ಗಿಫ್ಟ್ ಕೊಟ್ಟಿದ್ದರು.
- ನೀವು ಹಗಲು ಶೂಟಿಂಗ್ ಮುಗಿಸಿ ರಾತ್ರಿ ಕೋಣೆಗೆ ಹೋಗಿ ಕಣ್ಣೀರು ಹಾಕಿದ್ದಿರಂತೆ?
ಮಾಲಾಶ್ರೀ : ನನ್ನ ಮೊದಲನೇ ಸಿನಿಮಾ 'ನಂಜುಂಡಿ ಕಲ್ಯಾಣ' ಚಿತ್ರೀಕರಣದ ವೇಳೆ ನನಗೆ ಕನ್ನಡ ಬರುತ್ತಿರಲಿಲ್ಲ. ರಾಜ್ ಕುಮಾರ್ ಅವರ ಬ್ಯಾನರ್‌ನ ಸಿನಿಮಾ ಅದಾಗಿತ್ತು. ಭಾಷೆ ಬರದ ಕಾರಣದಿಂದ ಹಾವ-ಭಾವಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಅವರು ನನ್ನನ್ನು ವಾಪಸ್ ಕಳಿಸಿಬಿಡುತ್ತಾರೇನೋ ಎಂಬ ಭಯದಿಂದ ಅಳುತ್ತಿದ್ದೆನು. ಉದಯಶಂಕರ್ ಅವರು ನನಗೆ 30 ದಿನಗಳಲ್ಲಿ ಕನ್ನಡ ಕಲಿಯಿರಿ ಎಂಬ ಪುಸ್ತಕವನ್ನು ನೀಡಿದರು. ಆ ನಂತರ ಭಾಷಾ ಪಾಂಡಿತ್ಯ ಹೆಚ್ಚಾಯಿತು.
- ಎಷ್ಟು ಹಣವಿದ್ದರೂ ನೀವು ಸಿಂಪಲ್ಲಾಗಿ ಇರಬೇಕು ಎಂದು ಬಯಸುತ್ತೀರಂತೆ?
ಮಾಲಾಶ್ರೀ : ನಾನು ಟಿ.ನಗರದಲ್ಲಿದ್ದಾಗ ಅಲ್ಲಿನ ಕುಟುಂಬಗಳನ್ನು ದಿನವೂ ನೋಡುತ್ತಿದ್ದೆನು. ಅಲ್ಲಿನ ಮಹಿಳೆಯರು ಪ್ರತಿದಿನ ಬೆಳಗ್ಗೆ ಗಂಡನಿಗೆ ಊಟದ ಡಬ್ಬಿ ಕೊಟ್ಟು, ಮಕ್ಕಳನ್ನು ಸೈಕಲ್ ಅಥವಾ ಬೈಕ್ ಮೇಲೆ ಕುಳಿಸಿ, ದಿನವೂ ಟಾಟಾ ಹೇಳುತ್ತಿದ್ದರು. ನನಗೂ ಹಾಗೆಯೇ ಇರಬೇಕು ಎಂದು ಅನ್ನಿಸುತ್ತಿತ್ತು. ಎಷ್ಟೇ ಸಿನಿಮಾಗಳಲ್ಲಿ ನಟಿಸಿದರೂ ಆ ಭಾವ ನನ್ನನ್ನು ಇನ್ನೂ ಬಿಟ್ಟಿಲ್ಲ. ಸಿಂಪಲ್ ಆಗಿರೋದನ್ನೇ ನಾನು ಬಯಸುತ್ತೇನೆ.
- ಬಾಲ ಕಲಾವಿದರಿಗೆ ಸಾಮಾನ್ಯವಾಗಿ ಸ್ಕ್ರಿಪ್ಟ್ ಓದಲು ಕೊಡುತ್ತಾರೆ, ನಿಮಗೆ ಹಾರ್ಲಿಕ್ಸ್ ಬಾಟಲಿ ಕೊಟ್ಟಿದ್ದರಂತೆ?
ಮಾಲಾಶ್ರೀ : ಯಾಕೋ ಗೊತ್ತಿಲ್ಲ. ನನಗೆ ಹಾರ್ಲಿಕ್ಸ್ ತುಂಬಾ ಇಷ್ಟ. ಮನೆಗೆ ಹಾರ್ಲಿಕ್ಸ್ ತಂದರೆ, ಯಾರಿಗೂ ಗೊತ್ತಿಲ್ಲದಂತೆ ತಿಂದು ಬಿಡುತ್ತಿದ್ದೆ. ಒಂದು ದಿನ ಶೂಟಿಂಗ್ಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದೆನು. ಆಗ ಒಂದು ಹಾರ್ಲಿಕ್ಸ್ ಬಾಟೆಲ್ ನೀಡಿ, ಎಲ್ಲಾ ನಿನ್ನದೇ ತಿನ್ನು ಎಂದು ಹೇಳಿದರು. ಆಗ ನಾನು ಶೂಟಿಂಗ್ಗೆ ತೆರಳಿದೆ.
- ನೀವು ಡಾ.ರಾಜ್ಕುಮಾರ್ ಜೊತೆಗೆ ನಟಿಸಿದ್ದೀರಾ?
ಮಾಲಾಶ್ರೀ : ನಾನು ಅವರ ಜೊತೆ ನಟಿಸಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಟಿಸುವಾಗ ಪುನೀತ್ ಜೊತೆ ಗೋಲಿ ಆಟ ಆಡುತ್ತಿದ್ದೆನು. ನಿರ್ದೇಶಕರು ಬೇಡ ಅಂದರೂ ಕೇಳುತ್ತಿರಲಿಲ್ಲ. ಪಾರ್ವತಮ್ಮ ಅವರಿಗೆ ದೂರು ನೀಡುತ್ತಿದ್ದರು. ಆಗಾಗ ಅವರ ಮನೆಗೆ ಹೋಗುತ್ತಿದ್ದೆವು. ಅಲ್ಲಿಯೇ ಪುನೀತ್ ಜೊತೆ ಅಲ್ಲಿ ಊಟ ಮಾಡುವುದಷ್ಟೇ ಅಲ್ಲ.. ಪರಸ್ಪರ ಜಗಳ ಕೂಡ ಮಾಡುತ್ತಿದ್ದೆವು.
- ಯಾವಾಗ ನೋಡಿದರೂ ಶರ್ಟ್, ಪ್ಯಾಂಟ್ ಧರಿಸಿಯೇ ಕಾಣುತ್ತೀರಿ ಏಕೆ?
ಮಾಲಾಶ್ರೀ : ನನಗೆ ಹೆಚ್ಚಾಗಿ ಪೊಲೀಸ್, ಕಲೆಕ್ಟರ್, ಸಿಬಿಐ ಪಾತ್ರಗಳ ಸಿನಿಮಾಗಳನ್ನು ಮಾಡುತ್ತಿದ್ದೆನು. ಆ್ಯಕ್ಷನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣದಿಂದ ಜೀನ್ಸ್ ಮತ್ತು ಟಾಪ್ಸ್ ಧರಿಸುವುದು ಅಭ್ಯಾಸವಾಗಿದೆ. ಸ್ಯಾಂಡಲ್ವುಡ್ ಮಂದಿ ಹಾಗೆಯೇ ಇಷ್ಟ ಪಡುತ್ತಾರೆ.
ಇದನ್ನೂ ಓದಿ: ಬಾಲಿವುಡ್ಗೆ ಪ್ರವೇಶಿಸುವ ಮುನ್ನವೇ 80 ಲಕ್ಷ ರೂ.ನ ಕಾರು ಖರೀದಿಸಿದ ಶನಾಯಾ ಕಪೂರ್