ETV Bharat / sitara

ಬಾಲಿವುಡ್​​ಗೆ ಎಂಟ್ರಿ ಕೊಟ್ಟ ‘ಕಿರಿಕ್’​ ಹುಡುಗಿ ಸಂಯುಕ್ತಾ ಹೆಗಡೆ - Bollywood Webseries

‘ಪಂಚ್ ಬೀಟ್' ಎಂಬ ವೆಬ್​ ಸೀರಿಸ್​​​ನ ಸೀಸನ್ -2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದಾರೆ. ಈ ಸೀರಿಸ್​ನ ಟ್ರೈಲರ್ ಸಹ ರಿಲೀಸ್ ಆಗಿದ್ದು, ಜೂನ್ 27 ರಿಂದ ಆಲ್ಟ್​ ಬಾಲಾಜಿ ಒಟಿಟಿಯಲ್ಲಿ ಪ್ರಸಾರವಾಗಲಿದೆ..

samyuktha-hegde
ಸಂಯುಕ್ತಾ ಹೆಗಡೆ
author img

By

Published : Jun 11, 2021, 2:21 PM IST

ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಹುಡುಗಿ ಎಂದೇ ಜನಪ್ರಿಯರಾದವರು ಸಂಯುಕ್ತಾ ಹೆಗ್ಡೆ. ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ನಟಿಸಿ ಬಂದವರು. ಇದೀಗ ಬಾಲಿವುಡ್​​​ಗೂ ಎಂಟ್ರಿ ಕೊಡಲು ಮುಂದಾಗಿದ್ದಾರೆ. ಹಿಂದಿಯ ವೆಬ್​​ಸೀರಿಸ್‌ವೊಂದರಲ್ಲಿ ‘ಮಿಷಾ’ ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಕುರಿತು ಸಂಯುಕ್ತಾ ಇನ್ಸ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗಿರುವ ‘ಪಂಚ್ ಬೀಟ್' ಎಂಬ ವೆಬ್​ ಸೀರಿಸ್​​​ನ ಸೀಸನ್ -2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದಾರೆ. ಈ ಸೀರಿಸ್​ನ ಟ್ರೈಲರ್ ಸಹ ರಿಲೀಸ್ ಆಗಿದೆ. ಈ ವೆಬ್​ ಸೀರಿಸ್​​​ನಲ್ಲಿ ಸಂಯುಕ್ತಾ ಹೆಗ್ಡೆ ವಿಶೇಷ ಪಾತ್ರವೊಂದನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

samyuktha-hegde-makes-her-entry-in-bollywood-webseries
ಬಾಲಿವುಡ್​​ಗೆ ಎಂಟ್ರಿ ಕೊಟ್ಟ ‘ಕಿರಿಕ್’​ ಹುಡುಗಿ ಸಂಯುಕ್ತಾ ಹೆಗಡೆ

ಜೀವ ರಕ್ಷಕ ಕಲೆಗಳನ್ನು ಕಲಿತು, ಅಪ್ಪನ ಜಿಮ್ ನಡೆಸುವ ಮಿಶಾ ಹೆಸರಿನ ಯುವತಿಯ ಪಾತ್ರವಂತೆ ಅದು. ತಮ್ಮ ನಿಜಜೀವನಕ್ಕೆ ಬಹಳ ಹತ್ತಿರವಿರುವ ಪಾತ್ರವನ್ನು ಇದರಲ್ಲಿ ಮಾಡಿದ್ದು, ಅವರ ಜೊತೆಗೆ ಪ್ರಿಯಾಂಕ್ ಶರ್ಮಾ, ಸಮೀರ್ ಸೋನಿ, ನಿಕಿ ವಾಲಿಯಾ ಮುಂತಾದವರು ನಟಿಸಿದ್ದಾರೆ. ಏಕ್ತಾ ಕಪೂರ್ ತಮ್ಮ ಆಲ್ಟ್ ಬಾಲಾಜಿ ಒಟಿಟಿಗಾಗಿ ಈ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಆಕಾಶ್ ಚೌಬೆ ನಿರ್ದೇಶನದ ಈ ಸರಣಿ ಜೂನ್ 27ರಿಂದ ಪ್ರಸಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.