ಸಮಾಜಮುಖಿ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ ನಟಿ ಸಂಯುಕ್ತಾ ಹೊರನಾಡು. ಇದೀಗ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶನನ್ನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ
ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ಒಗ್ಗರಣೆ ಸಿನಿಮಾದ ಸುಂದರಿ. ಈ ಕೊರೊನಾ ಸಂದರ್ಭದಲ್ಲಿ ಬೀದಿ ಶ್ವಾನಗಳು, ಪೌರ ಕಾರ್ಮಿಕರು ಹಾಗೂ ಹಸಿದ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿದ್ರು.
ಕಳೆದ ನಾಲ್ಕು ವರ್ಷಗಳಿಂದ ಗಣೇಶ ಹಬ್ಬದಂದು, ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ, ತಮ್ಮ ಕೈಯಾರೆ ಗಣೇಶನನ್ನು ಮಾಡ್ತಾ ಬಂದಿದ್ದಾರೆ. ಈ ವರ್ಷವು ಕೂಡ ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ ಗಣೇಶ ಮಾಡಿ, ಎಲ್ಲರೂ ಮಣ್ಣಿನಲ್ಲಿ ಮಾಡಿರುವ ಗಣೇಶನನ್ನು ಬಳಸಿ ಹಾಗೇ ತಮ್ಮ ಮನೆಯಲ್ಲೇ ವಿಸರ್ಜನೆ ಮಾಡಿ ಅಂದಿದ್ದಾರೆ.
ಈ ವರ್ಷ ಕೊರೊನಾ ಇರುವುದರಿಂದ ಗಣೇಶ ವಿಸರ್ಜನೆ ಮಾಡಬೇಕಾದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಸದ್ಯ ಸಂಯುಕ್ತಾ ಹೊರನಾಡು ಮಣ್ಣಿನಲ್ಲಿ ಮಾಡಿರುವ ಗಣೇಶ ಅದ್ಬುತವಾಗಿ ಮೂಡಿ ಬಂದಿರೋದು ವಿಶೇಷ.