ETV Bharat / sitara

ನಟನೆ ಜೊತೆ ಸಮುದ್ರಂಗೆ ನಿರ್ಮಾಪಕಿಯಾದ ಸೈಕೋ ಅನಿತಾ ಭಟ್

author img

By

Published : Sep 10, 2021, 9:15 PM IST

ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ. ಅದು ನಿಜವೂ ಹೌದು. ಯಾಕೆಂದರೆ, ಇದು ಕಡಲ ಕಿನಾರೆಯ ನಿಗೂಢ ಕಥಾ ಹಂದರವನ್ನೊಳಗೊಂಡಿರೋ ಚಿತ್ರ..

ಶೀರ್ಷಿಕೆ ಅನಾವರಣ
ಶೀರ್ಷಿಕೆ ಅನಾವರಣ

ಸೈಕೋ‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ‌ ಎಂಟ್ರಿ‌ ಕೊಟ್ಟವರು ನಟಿ‌ ಅನಿತಾ ಭಟ್. ಸದ್ಯ ಬೋಲ್ಡ್ ಹಾಗೂ ವಿಭಿನ್ನ ಪಾತ್ರಗಳಿಂದಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಅನಿತಾ ಭಟ್, ನಟನೆ ಜೊತೆಗೆ ನಿರ್ಮಾಪಕಿಯಾಗುತ್ತಿದ್ದಾರೆ‌.

ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿರೋ‌ ಸಮುದ್ರ ಚಿತ್ರದ ಟೈಟಲ್ ಅ​​​ನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ‌ ಅನಾವರಣ ಮಾಡಿದರು. ಜತೆಗೆ ಈ‌‌ ಸಿನಿಮಾ‌ ಪೋಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮುದ್ರಂ ಚಿತ್ರದ ಶೀರ್ಷಿಕೆ ಅನಾವರಣ

ಸಾಮಾನ್ಯವಾಗಿ ಸಿನಿಮಾ ಮುಹೂರ್ತದ ಆಸುಪಾಸನಲ್ಲಿಯೇ ಟೈಟಲ್ ಲಾಂಚ್ ಮಾಡೋದು ರೂಢಿ. ಆದರೆ, ಈ ಚಿತ್ರ ತಂಡ ಮಾತ್ರ ಆ ಪದ್ಧತಿಯನ್ನು ಬ್ರೇಕ್ ಮಾಡಿದೆ. ಚಿತ್ರೀಕರಣವೆಲ್ಲ ಸಂಪೂರ್ಣ ಮುಗಿದಾದ ನಂತರವೇ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನಿಟ್ಟುಕೊಳ್ಳಲಾಗಿದೆ.

ಸಮುದ್ರಂ ಚಿತ್ರದ ಶೀರ್ಷಿಕೆ ಅನಾವರಣ

ಅಂದಹಾಗೆ, ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರೋ ಚಿತ್ರವಿದು. ಇದಕ್ಕೆ ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ ಸಹಯೋಗವಿದೆ. ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಮತ್ತು ಸ್ವಾತಿ ಬಂಗೇರ ಜೋಡಿ ಮತ್ತೆರಡು ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ. ಅದು ನಿಜವೂ ಹೌದು. ಯಾಕೆಂದರೆ, ಇದು ಕಡಲ ಕಿನಾರೆಯ ನಿಗೂಢ ಕಥಾ ಹಂದರವನ್ನೊಳಗೊಂಡಿರೋ ಚಿತ್ರ.

ಕಡಲೆಂದರೆ ಬಹುತೇಕರ ಮನಸು ನೀಲಾಕಾಶದಂತೆ ಪ್ರಪುಲ್ಲವಾಗುತ್ತದಲ್ಲಾ? ಅದರ ಕಿನಾರೆಗಳಲ್ಲಿ ಮೈಚಾಚಿಕೊಂಡ ಭೂಗತ ಚಟುವಟಿಕೆಗಳನ್ನ ಹೇಳ ಹೊರಟಿದೆ. ಅಂಥಾದ್ದೇ ಒಂದು ರಸವತ್ತಾದ ಕಥೆ ಈ ಚಿತ್ರದಲ್ಲಿದೆಯಂತೆ.

ಅನಿತಾ ಭಟ್
ಅನಿತಾ ಭಟ್

ರಾಘವ ಮಹರ್ಶಿ‌ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಶಿವಧ್ವಜ್ ಇಲ್ಲಿ ಡಾನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿತಾ ಭಟ್ ಎರಡು ಶೇಡ್‌ಗಳಿರೋ ಸವಾಲಿನ ಪಾತ್ರವನ್ನು ನಿಭಾಯಿಸಿದ್ದರಂತೆ. ಓರ್ವ ಗೃಹಿಣಿಯಾಗಿ, ಸಂದರ್ಭಾನುಸಾರ ರೆಬೆಲ್ ಆಗಿ ಈ ಸಮಾಜದೆದುರು ನಿಲ್ಲೋ ದಿಟ್ಟ ಹೆಣ್ಣಾಗಿಯೂ ಅವರು ನಟಿಸಿದ್ದಾರಂತೆ.

ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಶರವೇಗದಲ್ಲಿ ಸಮುದ್ರಂ ಚಿತ್ರೀಕರಣ ಮುಗಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ರಾಘವ ಮಹರ್ಷಿ ನಿರ್ದೇಶನ, ಆಕಾಶ್ ಪರ್ವ ಅವರ ಸಂಗೀತ ನಿರ್ದೇಶನವಿದೆ.

ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೆ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ರಿಷಿಕೇಶ್ ನಿಭಾಯಿಸಿದ್ದಾರೆ. ಕೊರೊನಾ ಕಡಿಮೆ ಆದಾಗ ಚಿತ್ರೀಕರಣವನ್ನ ಮಾಡಿರೋ‌ ಚಿತ್ರ ತಂಡ, ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್ ಮಾಡುವ ಪ್ಲಾನ್‌ನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.