ಹಿಂದಿಯ ಬಿಗ್ ಬಾಸ್ ಸೀಸನ್ 14 ಅಕ್ಟೋಬರ್ 3 ರಿಂದ ಪ್ರಸಾರವಾಗುವ ಸಾಧ್ಯತೆ ಇದೆ. ಈಗಾಗಲೇ ಈ ರಿಯಾಲಿಟಿ ಶೋಗೆ ಬೇಕಾಗುವ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸಲ್ಮಾನ್ ಖಾನ್ ಪ್ರೆಸ್ ಮೀಟ್ ಮಾಡಿದ್ದಾರೆ.
ಈ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿರುವ ಸಲ್ಮಾನ್ ಖಾನ್, ಈ ಬಾರಿ ಬಿಗ್ ಬಾಸ್ನ ನಡೆಸಲು ನಾನು ಕಡಿಮೆ ಸಂಭಾವನೆ ಪಡೆಯುತ್ತೇನೆ ಎಂದಿದ್ದಾರೆ. ಕೊರೊನಾ ಇರುವ ಕಾರಣ ಈ ಶೋಗಾಗಿ ಕೆಲಸ ಮಾಡುವ ಹಲವರಿಗೆ ಸಹಾಯವಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಲ್ಮಾನ್ ತಿಳಿಸಿದ್ದಾರೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">
- " class="align-text-top noRightClick twitterSection" data="
">
ಇನ್ನು ಈ ಕೊರೊನಾ ಕಾಲದಲ್ಲೂ ಬಿಗ್ ಬಾಸ್ ನಡೆಸುತ್ತಿರುವ ಕಾರಣ ತಿಳಿಸಿರುವ ಸಲ್ಮಾನ್, ಈ ಶೋನಿಂದಾಗಿ ಹಲವು ಜನರಿಗೆ ಕೆಲಸ ಸಿಗುತ್ತದೆ. ಅದರಿಂದ ಹತ್ತಾರು ಜನ ಊಟ ಮಾಡುತ್ತಾರೆ ಎಂದಿದ್ದಾರೆ.
ಇದೇ ಪ್ರೆಸ್ ಮೀಟ್ನಲ್ಲಿ ಮಾತನಾಡಿರುವ ಎಂಡೆಮೊಲ್ ಶೈನ್ ಇಂಡಿಯಾದ ಸಿಇಒ ಅಭಿಷೇಕ್ ರೆಗೆ, ಇನ್ನು ಕೊರೊನಾ ನಿಯಮ ಇರೋದ್ರಿಂದ ಕೆಲಸ ಮಾಡಲು ಶಿಫ್ಡ್ಗಳನ್ನು ಹಾಕಲಾಗಿದೆ. ಇದ್ರಿಂದ ಯಾರನ್ನು ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲ ಎಂದಿದ್ದಾರೆ. ಇನ್ನು ಕೆಲಸಗಾರರ ಬಗ್ಗೆ ಮಾತನಾಡಿರುವ ಅವರ, ಎಲ್ಲರಿಗೂ ಪೂರ್ತಿ ಸಂಬಳ ಕೊಡಲಾಗುತ್ತದೆ, ಆದ್ರೆ ಇಂಕ್ರಿಮೆಂಟ್ ಕೊಡಲು ಬಹುಶಃ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಇನ್ನು ದೊಡ್ಮನೆಗೆ ಹೋಗುವ ಸ್ಪರ್ಧಿಗಳನ್ನು ಮೊದಲು ಕ್ವಾರಂಟೈನ್ನಲ್ಲಿ ಇಡಲಾಗುತ್ತದೆಯಂತೆ. ನಂತ್ರ ಬಿಗ್ ಬಾಸ್ ಮನೆಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.