ETV Bharat / sitara

'ಗಾಡ್​​ ಫಾದರ್'ನಲ್ಲಿ ಮೆಗಾಸ್ಟಾರ್​ ಜತೆಯಾದ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ - ಮೆಗಾಸ್ಟಾರ್ ಚಿರಂಜೀವಿ ಲೇಟೆಸ್ಟ್​​ ನ್ಯೂಸ್​​

ಮೆಗಾಸ್ಟಾರ್​ ಚಿರಂಜೀವಿ ಅವರ 'ಗಾಡ್ ಫಾದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಚಿರಂಜೀವಿ ಅವರು ಖುದ್ದಾಗಿ ಟ್ವಿಟರ್​​​​ನಲ್ಲಿ ಹೇಳಿದ್ದಾರೆ.

salman khan in chiranjeevi film
ಮೆಗಾಸ್ಟಾರ್​ ಜತೆಯಾದ ಬಾಲಿವುಡ್ ಸೂಪರ್‌ಸ್ಟಾರ್
author img

By

Published : Mar 16, 2022, 1:40 PM IST

ಮುಂಬೈ(ಮಹಾರಾಷ್ಟ್ರ): ಮೆಗಾಸ್ಟಾರ್ ಚಿರಂಜೀವಿ ತಮ್ಮ ಮುಂಬರುವ ಚಿತ್ರವಾದ 'ಗಾಡ್‌ಫಾದರ್‌'ನಲ್ಲಿ ತಮ್ಮ ಆತ್ಮೀಯ ಸ್ನೇಹಿತ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಗಾಡ್‌ಫಾದರ್ ಸಿನಿಮಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಮೋಹನ್ ರಾಜ ನಿರ್ದೇಶಿಸಿದ್ದಾರೆ. ಈ ಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂನ ಸೂಪರ್‌ಹಿಟ್ ಚಿತ್ರ ಲೂಸಿಫರ್‌ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ಇದರಲ್ಲಿ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.

ಸೈರಾ ನರಸಿಂಹ ರೆಡ್ಡಿ ಅವರು ಸ್ಟಾರ್ ಭಾಯಿ ಅವರನ್ನು ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು ಮತ್ತು ಅವರೊಂದಿಗೆ ಇಡೀ ತಂಡ ಕೆಲಸ ಮಾಡುವುದು ಸಂಪೂರ್ಣ ಸಂತೋಷದ ವಿಚಾರ ಎಂದು ಹೇಳಿದ್ದಾರೆ. ಚಿರಂಜೀವಿ ಅವರ ಗಾಡ್ ಫಾದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಚಿರಂಜೀವಿ ಅವರು ಖುದ್ದಾಗಿ ಟ್ವಿಟರ್ ನಲ್ಲಿ ಹೇಳಿದ್ದಾರೆ.

ತಮ್ಮ ಆತ್ಮೀಯ ಸ್ನೇಹಿತ ಸಲ್ಮಾನ್ ಜತೆಗಿನ ಫೋಟೋವನ್ನು ಹಂಚಿಕೊಂಡ ಚಿರಂಜೀವಿ, #ಗಾಡ್‌ಫಾದರ್, ಭಾಯ್ @ಬೀಯಿಂಗ್ ಸಲ್ಮಾನ್‌ಖಾನ್‌ಗೆ ಸ್ವಾಗತ! ನಿಮ್ಮ ಪ್ರವೇಶವು ಎಲ್ಲರಿಗೂ ಶಕ್ತಿ ತುಂಬಿದೆ ಮತ್ತು ಉತ್ಸಾಹವು ಮುಂದಿನ ಹಂತಕ್ಕೆ ಹೋಗಿದೆ. ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವುದು ಸಂಪೂರ್ಣ ಸಂತೋಷವಾಗಿದೆ ಎಂದು ಹೇಳಿದ್ದಾರೆ.

salman khan in chiranjeevi film
ಮೆಗಾಸ್ಟಾರ್​ ಜತೆಯಾದ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್

ಗಾಡ್‌ಫಾದರ್‌ ಚಿತ್ರದಲ್ಲಿ ನಯನತಾರಾ ಮತ್ತು ಸತ್ಯದೇವ್ ಕಾಂಚರಣ ನಟಿಸಿದ್ದು, ಥಮನ್. ಎಸ್ ಅವರ ಸಂಗೀತ ಸಂಯೋಜನೆಯಿದೆ. ಕೊನಿಡೇಲ ಪ್ರೊಡಕ್ಷನ್ಸ್ ಮತ್ತು ಸೂಪರ್ ಗುಡ್ ಫಿಲ್ಮ್ಸ್ಈ ಚಿತ್ರವನ್ನು ನಿರ್ಮಿಸುತ್ತಿವೆ.

ಇದನ್ನೂ ಓದಿ: ಟೈಗರ್​-3 ಸಿನಿಮಾ ಮುಂದಿನ ಈದ್​ಗೆ ತೆರೆಗೆ : ನಿರ್ದೇಶಕ ಮನೀಶ್​ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.