ETV Bharat / sitara

ಬಿಗ್‌ಬಾಸ್‌ 15: 14 ವಾರ ನಡೆಯುವ ಶೋಗೆ ₹350 ಕೋಟಿ ಪಡೆದರೇ ಸಲ್ಮಾನ್ ಖಾನ್?

author img

By

Published : Sep 20, 2021, 6:39 PM IST

ಹಿಂದಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಬಿಗ್​ಬಾಸ್​​ನಲ್ಲಿ ನಿರೂಪಣೆ ಕಾರ್ಯ ನಿರ್ವಹಿಸುತ್ತಿರುವ ಸಲ್ಮಾನ್ ಖಾನ್​ ಈ ಸಲ ದಾಖಲೆಯ ಸಂಭಾವನೆ ಪಡೆದುಕೊಂಡಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ.

salman
salman

ಮುಂಬೈ: ಬಾಲಿವುಡ್​​ನ ಮೋಸ್ಟ್ ಬ್ಯಾಚುಲರ್ ಬಾಯ್​ ಸಲ್ಮಾನ್ ಖಾನ್ ಸಿನಿಮಾದಲ್ಲಿನ ನಟನೆಗೋಸ್ಕರ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರ ನಿರೂಪಣೆಯಲ್ಲೇ ಮೂಡಿ ಬರುತ್ತಿರುವ ಬಿಗ್​ಬಾಸ್​​​​ ರಿಯಾಲಿಟಿ ಶೋಗೂ ದಾಖಲೆಯ ಮೊತ್ತ ಪಡೆದುಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಕೋವಿಡ್ ಕಾರಣದಿಂದಾಗಿ ಈ ಸಲದ 15ನೇ ಆವೃತ್ತಿ ಬಿಗ್​ಬಾಸ್​​ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದ್ದು, ಅದರ ನಿರೂಪಕರಾಗಿರುವ ನಟ ಸಲ್ಮಾನ್ ಖಾನ್ ದಾಖಲೆಯ 350 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಲೆಟ್ಸ್​ ಒಟಿಟಿ ಇದರ ಬಗ್ಗೆ ವರದಿ ಮಾಡಿದ್ದು, ಸುಮಾರು 14 ವಾರಗಳ ಕಾಲ ನಡೆಯುವ ಬಿಗ್​ಬಾಸ್​​ ರಿಯಾಲಿಟಿ ಶೋಗೆ ಇಷ್ಟೊಂದು ಹಣ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.

14ನೇ ಆವೃತ್ತಿ ಬಿಗ್​ಬಾಸ್ ನಡೆದ ಸಂದರ್ಭದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಕಡಿಮೆ ಸಂಭಾವನೆ ಪಡೆದುಕೊಂಡಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಈ ಸಲದ ಸಂಭಾವನೆಯಲ್ಲಿ ಏರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ತಾವು ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್​ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ಇದನ್ನೂ ಓದಿ: 'ದೇವರ ಮನೆ'ಯಲ್ಲೀಗ ಸ್ಮಶಾನ ಮೌನ.. ಮಡದಿ-ಮಗ ಸೇರಿ ಪತಿಯೂ ಆತ್ಮಹತ್ಯೆ..

ಪ್ರತಿ ಎಪಿಸೋಡ್‌ಗೆ 25 ಕೋಟಿ ರೂ:

ಬಿಗ್​ಬಾಸ್​​ 13ರ ಆವೃತ್ತಿಯ ಪ್ರತಿ ಎಪಿಸೋಡ್​ಗೆ 13 ಕೋಟಿ ರೂ. ಪಡೆದುಕೊಳ್ಳುತ್ತಿದ್ದ ಸಲ್ಮಾನ್​ ಖಾನ್​​, 14ನೇ ಆವೃತ್ತಿ ವೇಳೆ ಪ್ರತಿ ಎಪಿಸೋಡ್​​ನಿಂದ ಕೇವಲ 2.5 ಕೋಟಿ ರೂ. ಪಡೆದುಕೊಂಡಿದ್ದರು. ಆದರೆ 15ನೇ ಆವೃತ್ತಿಗೋಸ್ಕರ ಪ್ರತಿ ಎಪಿಸೋಡ್​​ನಿಂದ 25 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆಂದು ವರದಿಯಾಗಿದೆ. 4ರಿಂದ 6ನೇ ಆವೃತ್ತಿವರೆಗೆ ಸಲ್ಮಾನ್​​ 2.5 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.