ETV Bharat / sitara

ಆ ರೀತಿ ನಟಿಸಲು ನನಗೆ ಸಾಧ್ಯವೇ ಇಲ್ಲ...ಸಾಯಿ ಪಲ್ಲವಿ ಹೀಗೆ ಹೇಳಿದ್ದು ಯಾವ ವಿಚಾರವಾಗಿ...?

author img

By

Published : Dec 14, 2020, 8:21 AM IST

Updated : Dec 14, 2020, 12:38 PM IST

ಚಿತ್ರವೊಂದರಲ್ಲಿ ಲಿಪ್​ಲಾಕ್ ದೃಶ್ಯದಲ್ಲಿ ನಟಿಸುವ ಸಂಧರ್ಭ ಬಂತು. ಅದರೆ ನನಗೆ ಅಂತಹ ದೃಶ್ಯಗಳಲ್ಲಿ ನಟಿಸಲು ಇಷ್ಟವಾಗುವುದಿಲ್ಲ. ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದರೂ, ಲಿಪ್​​ಲಾಕ್ ಮಾಡಲು ನಾನು ರೆಡಿ ಇಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

Sai pallavi
ಸಾಯಿ ಪಲ್ಲವಿ

ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಬಣ್ಣದ ಪಯಣ ಆರಂಭಿಸಿದ ನಟಿ ಸಾಯಿ ಪಲ್ಲವಿ, 'ಪ್ರೇಮಂ' ಚಿತ್ರದ ಮೂಲಕ ಬೆಳಕಿಗೆ ಬಂದವರು. ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿಗೆ ಚುಂಬನ ದೃಶ್ಯಗಳಲ್ಲಿ ನಟಿಸಲು ಬರುವುದಿಲ್ಲವಂತೆ. ನಾನು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುತ್ತೇನೆ. ಆದರೆ ಲಿಪ್​ಲಾಕ್​ ಸನ್ನಿವೇಶಗಳಲ್ಲಿ ಮಾತ್ರ ನಟಿಸುವುದಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

Sai pallavi
ಸಾಯಿ ಪಲ್ಲವಿ

ಇದನ್ನೂ ಓದಿ: 'ಯುವರತ್ನ' ಚಿತ್ರೀಕರಣ ಶುರುವಾಗಿ ಎರಡು ವರ್ಷ; ಸಿನಿ ಪ್ರಿಯರ ಕುತೂಹಲ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ಚಿತ್ರವೊಂದರಲ್ಲಿ ರೊಮ್ಯಾಂಟಿಕ್ ಸನ್ನಿವೇಶದಲ್ಲಿ ನಟಿಸುವ ಸಂದರ್ಭ ಬಂತು. ಅದರಲ್ಲಿ ಹೀರೋಗೆ ಲಿಪ್​​​​ಲಾಕ್ ಮಾಡಬೇಕು ಎಂದು ನಿರ್ದೇಶಕರು ಹೇಳಿದರು. ಆದರೆ ಅಂತಹ ದೃಶ್ಯಗಳಲ್ಲಿ ನಟಿಸಲು ನನಗೆ ಇಷ್ಟವಾಗುವುದಿಲ್ಲ ಎಂದು ಹೇಳಿ ಆ ದೃಶ್ಯದಲ್ಲಿ ನಟಿಸುವುದರಿಂದ ತಪ್ಪಿಸಿಕೊಂಡೆ ಎಂದು ಹೇಳುತ್ತಾರೆ ಸಾಯಿ ಪಲ್ಲವಿ. 'ಫಿದಾ' ಚಿತ್ರದಲ್ಲಿ ಡ್ಯಾನ್ಸ್ ಹಾಗೂ ತೆಲಂಗಾಣ ಆಡುಭಾಷೆಯಲ್ಲಿ ಡೈಲಾಗ್ ಹೇಳುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದ ಈ ಸಹಜ ಸುಂದರಿ, ನಾಣಿ ಜೊತೆ 'ಎಂಸಿಎ' ಚಿತ್ರದಲ್ಲಿ ನಟಿಸುವ ಮೂಲಕ ಕೂಡಾ ತೆಲುಗು ಸಿನಿಪ್ರಿಯರಿಗೆ ಹತ್ತಿರವಾಗಿದ್ದರು. ಡ್ಯಾನ್ಸ್ ಎಂದರೆ ವಿಶೇಷ ಆಸಕ್ತಿ ತೋರುವ ಸಾಯಿ ಪಲ್ಲವಿ ಸದ್ಯಕ್ಕೆ ತೆಲುಗಿನಲ್ಲಿ ಲವ್ ಸ್ಟೋರಿ, ವಿರಾಟಪರ್ವಂ ಹಾಗೂ ತಮಿಳು ವೆಬ್​ ಸೀರೀಸ್​​​​​​​​​​​​​​​​​​​​​​​​ವೊಂದರಲ್ಲಿ ನಟಿಸುತ್ತಿದ್ದಾರೆ. ಎಕ್ಸ್​​​ಪೋಸ್, ಲಿಪ್​​​ಲಾಕ್​ ಮಾಡಲು ರೆಡಿ ಎನ್ನುವ ನಾಯಕಿಯರ ನಡುವೆ ಸಾಯಿ ಪಲ್ಲವಿ ಅಂತಹ ದೃಶ್ಯಗಳಲ್ಲಿ ನಟಿಸುವುದೇ ಇಲ್ಲ ಖಡಕ್ ಆಗಿ ಹೇಳಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Last Updated : Dec 14, 2020, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.