ETV Bharat / sitara

RRR Trailer ನೋಡಿದ್ರಾ?: ಯೂಟ್ಯೂಬ್-ಥಿಯೇಟರ್​ಗಳಲ್ಲಿ ‘ಆರ್‌ಆರ್‌ಆರ್‌’ ಟ್ರೈಲರ್ ರಿಲೀಸ್ - Jr. NTR action movie RRR

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರದ ಟ್ರೈಲರ್ ಥಿಯೇಟರ್​ಗಳಲ್ಲಿ ಹಾಗೂ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ಬ್ರಿಟಿಷರ ದೌರ್ಜನ್ಯ, ದೇಶಭಕ್ತಿ, ಹೋರಾಟ, ಪ್ರೀತಿ-ವಾತ್ಸಲ್ಯ ಹಾಗು ಆ್ಯಕ್ಷನ್​ ಕಂಡ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

RRR
ಆರ್‌ಆರ್‌ಆರ್‌
author img

By

Published : Dec 9, 2021, 12:39 PM IST

Updated : Dec 9, 2021, 3:19 PM IST

ಹೈದರಾಬಾದ್​: ಟೀಸರ್​ ಹಾಗೂ 'ನಾಟು ನಾಟು' ಹಾಡಿನ ಮೂಲಕ ಧೂಳೆಬ್ಬಿಸಿರುವ 'ಬಾಹುಬಲಿ' ಖ್ಯಾತಿಯ​ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ (RRR) ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇಂದು ಥಿಯೇಟರ್​ಗಳಲ್ಲಿ ಹಾಗೂ ಯೂಟ್ಯೂಬ್​ನಲ್ಲಿ ಸಿನಿಮಾದ ಟ್ರೈಲರ್​ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿದ್ದ ವೀಕ್ಷಕರು ಶಿಳ್ಳೆ ಹೊಡೆದು, ಕುಣಿದು ಕುಪ್ಪಳಿಸಿದ್ದಾರೆ. ತೆಲುಗಿನ ಸೂಪರ್​ ಸ್ಟಾರ್​ಗಳಾದ ಜೂನಿಯರ್​ ಎನ್‌ಟಿಆರ್, ರಾಮ್ ಚರಣ್ ತೇಜ್​ ಹಾಗೂ ಬಾಲಿವುಡ್​ ನಟಿ ಆಲಿಯಾ ಭಟ್​, ಅಜಯ್​ ದೇವಗನ್​ ಈ ಸಿನಿಮಾದಲ್ಲಿ ನಟಿಸಿದ್ದು, ಟ್ರೈಲರ್​ನಲ್ಲಿ ಬ್ರಿಟಿಷರ ದೌರ್ಜನ್ಯ, ದೇಶಭಕ್ತಿ, ಹೋರಾಟ, ಪ್ರೀತಿ-ವಾತ್ಸಲ್ಯ, ಆ್ಯಕ್ಷನ್​ ಕಂಡವರು ಫಿದಾ ಆಗಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ರಾಜ್ಯದ 30 ಥಿಯೇಟರ್​ಗಳಲ್ಲಿ ಎಸ್ಎಸ್ ರಾಜಮೌಳಿಯ RRR ಸಿನಿಮಾದ ಟ್ರೈಲರ್ ಅನಾವರಣ!

ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಾಂ ಭೀಮ್ ಅವರಿಂದ ಪ್ರೇರಿತವಾದ ಕಾಲ್ಪನಿಕ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಹಾಗೂ ಕೊಮರಾಂ ಭೀಮ್ ಪಾತ್ರದಲ್ಲಿ ಎನ್‌ಟಿಆರ್ ಮಿಂಚಿದ್ದಾರೆ. 2022ರ ಜನವರಿ 7 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 'ಆರ್​ಆರ್​ಆರ್' ಸಿನಿಮಾ ತೆರೆ ಮೇರೆ ಬರಲಿದೆ.

Last Updated : Dec 9, 2021, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.