ETV Bharat / sitara

ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಆರ್​ಆರ್​​ಆರ್ ಚಿತ್ರತಂಡ.. ಹೋಟೆಲ್​ನಲ್ಲಿ ವಾಕಿಂಗ್​ ಮಾಡಿದ ರಾಜಮೌಳಿ - ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಆರ್​ಆರ್​​ಆರ್ ಚಿತ್ರತಂಡ

ಇಂದು ಸಂಜೆ ಚಿಕ್ಕಬಳ್ಳಾಪುರ ಅಗಲಗುರ್ಕಿಯಲ್ಲಿ ಆರ್​ಆರ್​ಆರ್​ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಚಿತ್ರತಂಡ ಮುಂಬೈನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದೆ.

RRR Movie team came Chikkaballapur from Dubai
ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಆರ್​ಆರ್​​ಆರ್ ಚಿತ್ರತಂಡ
author img

By

Published : Mar 19, 2022, 9:59 AM IST

Updated : Mar 19, 2022, 10:23 AM IST

ಬೆಂಗಳೂರು: ಇಂದು ಚಿಕ್ಕಬಳ್ಳಾಪುರ ಅಗಲಗುರ್ಕಿಯಲ್ಲಿ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಚಿತ್ರತಂಡ ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದಿದೆ.

ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಆರ್​ಆರ್​​ಆರ್ ಚಿತ್ರತಂಡ

ಕರ್ನಾಟಕದಲ್ಲಿ ಕೆವಿಎನ್​ ಪ್ರೊಡಕ್ಷನ್​ ಸಂಸ್ಥೆ ಆರ್​ಆರ್​ಆರ್​ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಕೆವಿಎನ್​ ಪ್ರೊಡಕ್ಷನ್​ ಸಂಸ್ಥೆಯ ಮಾಲೀಕ ವಂಕಟ್​​ ಕೊಣಂಕಿಯವರು ಅಗಲಗುರ್ಕಿಯಲ್ಲಿ ಚಿತ್ರದ ಪ್ರೀ ರಿಲೀಸ್​ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ. ಸುಮಾರು ನೂರು ಎಕರೆ ಜಾಗದಲ್ಲಿ ಎರಡು ಲಕ್ಷ ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅಗಲಗುರ್ಕಿಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರ್​​ಆರ್​​​ಆರ್ ಚಿತ್ರತಂಡ ಇಂದು ಮುಂಜಾನೆ ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದು, ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ಜೆಡಬ್ಲ್ಯೂ ಮ್ಯಾರಿಯಟ್​​ ಹೋಟೆಲ್​​​ನಲ್ಲಿ(Prestige Golfshire jw Marriott) ಉಳಿದುಕೊಂಡಿದೆ. ನಿರ್ದೇಶಕ ರಾಜಮೌಳಿ ಹೋಟೆಲ್​ ಆವರಣದಲ್ಲಿ ವಾಕಿಂಗ್ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಇಂದು ಸಂಜೆ ನಡೆಯಲಿರುವ ಆರ್​ಆರ್​​ಆರ್​ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್​ಕುಮಾರ್, ಆರೋಗ್ಯ ಸಚಿವ ಕೆ.ಸುಧಾಕರ್​ ಆಗಮಿಸಲಿದ್ದಾರೆ. ಆರ್​ಆರ್​ಆರ್​ ಸಿನಿಮಾ ಮಾರ್ಚ್​.25ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಆರ್​ಆರ್​ಆರ್' ಸಿನಿಮಾ​ ಪ್ರಿ ರಿಲೀಸ್‌ ಕಾರ್ಯಕ್ರಮ: ಚಿಕ್ಕಬಳ್ಳಾಪುರದಲ್ಲಿ ಭರ್ಜರಿ ಸಿದ್ಧತೆ

Last Updated : Mar 19, 2022, 10:23 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.