ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ಹಾಗೂ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಅನೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡಲಾಗ್ತಿದೆ. ಇದರ ಪರಿಣಾಮ ಸಿನಿಮಾ ರಂಗದ ಮೇಲೆ ನೇರವಾಗಿ ಬೀರುತ್ತಿರುವ ಕಾರಣ ಅನೇಕ ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗ್ತಿದೆ.
-
Keeping the best interests of all the involved parties in mind, we are forced to postpone our film. Our sincere thanks to all the fans and audience for their unconditional love. #RRRPostponed #RRRMovie pic.twitter.com/JlYsgNwpUO
— RRR Movie (@RRRMovie) January 1, 2022 " class="align-text-top noRightClick twitterSection" data="
">Keeping the best interests of all the involved parties in mind, we are forced to postpone our film. Our sincere thanks to all the fans and audience for their unconditional love. #RRRPostponed #RRRMovie pic.twitter.com/JlYsgNwpUO
— RRR Movie (@RRRMovie) January 1, 2022Keeping the best interests of all the involved parties in mind, we are forced to postpone our film. Our sincere thanks to all the fans and audience for their unconditional love. #RRRPostponed #RRRMovie pic.twitter.com/JlYsgNwpUO
— RRR Movie (@RRRMovie) January 1, 2022
ಒಮಿಕ್ರಾನ್ ಆತಂಕ ಬೆನ್ನಲ್ಲೇ ಈಗಾಗಲೇ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗಿದ್ದು, ಅದರ ಬೆನ್ನಲ್ಲೇ ಇದೀಗ ‘ಆರ್ಆರ್ಆರ್’ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರ ತಂಡ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಈಗಾಗಲೇ ಕರ್ನಾಟಕ ಸೇರಿದಂತೆ ಅನೇಕ ಕಡೆ ಅದ್ಧೂರಿಯಾಗಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದ ಚಿತ್ರತಂಡ 2022ರ ಜನವರಿ 7ರಂದು ತೆಲುಗು, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ, ಇದೀಗ ದಿಢೀರ್ ಆಗಿ ಮುಂದೂಡಿಕೆ ಮಾಡಿದೆ.
ಚಿತ್ರತಂಡದಿಂದ ಟ್ವೀಟ್
ಬಹುನಿರೀಕ್ಷಿತ ಚಿತ್ರ RRR ಮಂದೂಡಿಕೆ ಮಾಡಲಾಗಿದ್ದು, ಎಲ್ಲರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರ ಪ್ರೀತಿಗೆ ನಮ್ಮ ಧನ್ಯವಾದಗಳು ಎಂದು ತಿಳಿಸಿದೆ.
ಕೊರೊನಾ ಹಾಗೂ ಒಮಿಕ್ರಾನ್ನಿಂದಾಗಿ ಅನೇಕ ಚಿತ್ರಮಂದರಿ ಬಂದ್ ಆಗಿದ್ದು, ಕೆಲವೆಡೆ ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಇದು ಸೂಕ್ತ ಸಮಯವಲ್ಲ ಎಂದು ಆರ್ಆರ್ಆರ್ ಚಿತ್ರತಂಡ ನಿರ್ಧರಿಸಿದೆ.
ಇದನ್ನೂ ಓದಿರಿ: ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನ
ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್ ಆರ್ಆರ್ಆರ್ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಅಲಿಯಾ ಭಟ್ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕೋಟ್ಯಂತರ ರೂ. ನಷ್ಟ
ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕೋಟ್ಯಂತರ ರೂ. ಖರ್ಚು ಮಾಡಿದೆ. ಜೊತೆಗೆ ಜನವರಿ 7 ರಂದು ಚಿತ್ರ ರಿಲೀಸ್ ಆಗಲಿದೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರು ಟಿಕೆಟ್ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಅಪಾರ ಪ್ರಮಾಣದ ನಷ್ಟವಾಗಲಿದೆ.