ETV Bharat / sitara

ಯುಗಾದಿ ಹಬ್ಬದಂದು "ಆರ್​ಆರ್​ಆರ್​" ಚಿತ್ರದ ಹೊಸ ಪೋಸ್ಟರ್ ಬಿಡುಗಡೆ - ಯುಗಾದಿ ಹಬ್ಬ

ಯುಗಾದಿ ಹಬ್ಬದಂದು "ಆರ್​ಆರ್​ಆರ್​" ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿದೆ. ಅಕ್ಟೋಬರ್ 13ರಂದು ದಸರಾ ಸಂದರ್ಭದಲ್ಲಿ ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ.

RRR
RRR
author img

By

Published : Apr 13, 2021, 3:31 PM IST

ಮುಂಬೈ: ಯುಗಾದಿ ಹಬ್ಬದಂದು "ಆರ್​ಆರ್​ಆರ್​" ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿದೆ. ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದೆ.

ಪೋಸ್ಟರ್‌ನಲ್ಲಿ ಚಿತ್ರದ ಪ್ರಮುಖ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದು, ಇದು ಸಂಭ್ರಮಾಚರಣೆಯ ದೃಶ್ಯವಾಗಿದೆ. ಇವರಿಬ್ಬರನ್ನೂ ಜನಸಾಗರದ ಮಧ್ಯೆ ಕಾಣಬಹುದು.

ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಹಾಗೂ ಅಜಯ್ ದೇವಗನ್ ಪೋಸ್ಟರ್ ಹಂಚಿಕೊಂಡಿದ್ದು, ಯುಗಾದಿ ಹಬ್ಬದ ಶುಭಾಷಯ ಕೋರಿದ್ದಾರೆ.

ಅಕ್ಟೋಬರ್ 13ರಂದು ದಸರಾ ಸಂದರ್ಭದಲ್ಲಿ ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.