ETV Bharat / sitara

ಸ್ನೇಹಿತನ ಪ್ರತಿಭೆ ಕೊಂಡಾಡಿದ ರಾಕಿ ಭಾಯ್ - ಎ.ಪಿ ಅರ್ಜುನ್

ಅರ್ಜುನ್ ಕಥೆ ಮಾಡಿದಾಗ ನನ್ನ ಬಳಿ ಚರ್ಚೆ ಮಾಡುತ್ತಾರೆ. ನನಗೆ ಅವರ ಕೆಲಸ ಇಷ್ಟ ಆಗಿದೆ. ಅವರ ಶಕ್ತಿಗೆ ಇಂದು ಅವರು ಬೆಳದಿರುವುದೇ ಸಾಕ್ಷಿ. ಇದೀಗ ‘ಕಿಸ್’ ಚಿತ್ರದ ಮೂಲಕ ನಿರ್ಮಾಪಕ ಸಹ ಆಗಿರುವುದು ಶ್ಲಾಘನೀಯ ಎಂದಿದ್ದಾರೆ ರಾಕಿಭಾಯ್​ ಯಶ್​.

Ap arjun
author img

By

Published : Aug 27, 2019, 9:01 AM IST

ರಾಕಿಂಗ್ ಸ್ಟಾರ್ ಯಶ್ 'ಕಿಸ್' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ತನ್ನ ಹಳೆಯ ಗೆಳೆಯ ಎ.ಪಿ. ಅರ್ಜುನ್ ಅವರನ್ನು ಕೊಂಡಾಡಿದರು.

ಟ್ರೈಲರ್ ಬಿಡುಗಡೆ ನಂತರ ತಮ್ಮ ಹಳೆಯ ನೆನಪುಗಳಿಗೆ ಜಾರಿದ ಯಶ್​​, ಸೀರಿಯಲ್​​ನಲ್ಲಿ ಅಭಿನಯಿಸುವಾಗ ಅರ್ಜುನ್ ಜೊತೆ ಸ್ನೇಹ ಬೆಳೆಯಿತು. ಆಗ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅಂದೇ ಅವರಲ್ಲಿರುವ ಪ್ರತಿಭೆ ಬಗ್ಗೆ ನನಗೆ ಗೊತ್ತಿತ್ತು. ಈಗ ಅವರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಆಗಿ ಕಂಗೊಳಿಸಿಸುತ್ತಿದ್ದಾರೆ ಎಂದರು.

ಅರ್ಜುನ್ ಕಥೆ ಮಾಡಿದಾಗ ಮೊದಲು ನನ್ನ ಬಳಿ ಚರ್ಚೆ ಮಾಡುತ್ತಾರೆ. ನನಗೆ ಅವರ ಕೆಲಸ ಇಷ್ಟ ಆಗಿದೆ. ಅವರ ಶಕ್ತಿಗೆ ಇಂದು ಅವರು ಬೆಳದಿರುವುದೇ ಸಾಕ್ಷಿ. ಇದೀಗ ‘ಕಿಸ್’ ಚಿತ್ರದ ಮೂಲಕ ನಿರ್ಮಾಪಕ ಸಹ ಆಗಿರುವುದು ಶ್ಲಾಘನೀಯ ಎಂದರು ಯಶ್​.

ಇದೇ ವೇಳೆ ಕಿಸ್ ಚಿತ್ರದ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲಾ ಅವರಿಗೆ ವಿಶ್ ಮಾಡಿದ ರಾಕಿಭಾಯ್​, ಈ ಯುವ ಜೋಡಿ ಭಾರತದಲ್ಲಿ ಒಂದು ರೌಂಡ್ ಹೊಡೆದು ಬರುತ್ತಾರೆ ಎಂದು ಭವಿಷ್ಯ ನುಡಿದರು. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಬತ್ತಳಿಕೆಯಿಂದ ಒಳ್ಳೆಯ ಗೀತೆಗಳು ಬಂದಿವೆ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಿಸ್’.... ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಗಿರೀಶ್​ ಗೌಡ ಅವರ ಛಾಯಾಗ್ರಹಣ, ಡಾ. ಕೆ ರವಿ ವರ್ಮ ಅವರ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಚಿತ್ರ ತಂಡದೊಂದಿಗೆ ಸೇರಿಕೊಂಡಿದೆ.

ಸ್ನೇಹಿತ ಎ ಪಿ ಅರ್ಜುನ್ ಕೊಂಡಾಡಿದ ರಾಕಿಂಗ್ ಸ್ಟಾರ್ ಯಷ್

ರಾಕಿಂಗ್ ಸ್ಟಾರ್ ಯಷ್ ಇದ್ದ ಕಡೆ ಜನ ಜಾತ್ರೆ. ಅಭಿಮಾನಿಗಳ ಮಹಾಪೂರ ಸಹ ಇರುತ್ತದೆ. ಮೊನ್ನೆ ಸಹ ಕಿಸ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಾಗೆ ಆಯಿತು. ಅಂತಹ ತುಂಬಿದ ಸಮಾರಂಭದಲ್ಲಿ ಯಷ್ ತನ್ನ ಹಳೆಯ ಗೆಳೆಯ ಎ ಪಿ ಅರ್ಜುನ್ ಅವರನ್ನು ಬಹಳವಾಗಿ ಕೊಂಡಾಡಿದರು.

ಯಷ್ ಯಾವಾಗಲೂ ಹಾಗೆಯೇ. ಸಮಯ ಸಂದರ್ಭ ಸಿಕ್ಕಾಗ ತಾನು ಕಂಡಿದ್ದ ಸತ್ಯವನ್ನು, ಹಳೆಯ ದಿವಸಗಳನ್ನು ಮೆಲಕು ಹಾಕಲು ಮರೆಯುವುದಿಲ್ಲ.

ಯಷ್ ತಮ್ಮ ಹಳೆಯ ನೆನಪುಗಳಿಗೆ ಜಾರಿದರು. ಎ ಪಿ ಅರ್ಜುನ್ ಜೊತೆ ಟಿ ವಿ ಸೀರಿಯಲ್ ಅಭಿನಯ ಮಾಡುವಾಗ ಸ್ನೇಹ ನಿಕಟವಾಯಿತು. ಆಗ ಸಹಾಯಕ ನಿರ್ದೇಶಕ ಎ ಪಿ ಅರ್ಜುನ್. ಅವರ ಬಳಿ ಇರುವ ಪ್ರತಿಭೆ ನನಗೆ ಆಗಲೇ ಗೊತ್ತಿತ್ತು. ಹಾಗೆ ಅವರು ಕನ್ನಡ ಸಿನಿಮಾದಲ್ಲಿ ನಿರ್ದೇಶಕ ಆಗಿ ಕಂಗೊಳಿಸಿದ್ದಾರೆ. ಅರ್ಜುನ್ ಕಥೆ ಮಾಡಿದಾಗ ನನ್ನ ಬಳಿ ಚರ್ಚೆ ಮಾಡುತ್ತಾರೆ. ನನಗೆ ಅವರ ಹಲವಾರು ಕೆಲಸಗಳು ಇಷ್ಟ ಆಗಿದೆ. ಅವರ ಶಕ್ತಿಗೆ ಇಂದು ಅವರು ಬೆಳದಿರುವುದೇ ಸಾಕ್ಷಿ. ಇಂದು ಅವರು ನಿರ್ಮಾಪಕ ಸಹ ಕಿಸ್ ಸಿನಿಮಾ ಇಂದ ಆಗಿರುವುದು ಶ್ಲಾಘನೀಯ.ಯಷ್ ಆ ಬಳಿಕ ಎ ಪಿ ಅರ್ಜುನ್ ಅವರ ತಾಯಿಯನ್ನೂ ಜ್ಞಾಪಿಸಿಕೊಂಡರು.

ಕಿಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ವೀಕ್ಷಿಸಿದ ಯಷ್ ಅವರ ನೋಟ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲ ಮೇಲೆ ಹೊರಳಿತು. ಈ ಯುವ ಜೋಡಿ ಭಾರತದಲ್ಲಿ ಒಂದು ರೌಂಡ್ ಹೊಡೆದು ಬರುತ್ತಾರೆ ಎಂಬ ಆಶ್ವಾಸನೆ ಮಾತು ಹೇಳಿಕೊಂಡರು. ಸಂಗೀತ ನಿರ್ದೇಶನ ವಿ ಹರಿಕೃಷ್ಣ ತಮ್ಮ ಬತ್ತಳಿಕೆ ಇಂದ ಯಾವಾಗಲೂ ಒಳ್ಳೆಯ ಗೀತೆಗಳು ಬಂದಿವೆ ಸಹ ಎಂದರು ಯಷ್.  

ಕಿಸ್’....ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತಗಿರೀಷ್ ಗೌಡ ಅವರ ಛಾಯಾಗ್ರಹಣಡಾ ಕೆ ರವಿ ವರ್ಮ ಅವರ ಸಾಹಸದೀಪು ಎಸ್ ಕುಮಾರ್ ಸಂಕಲನ, ರವಿ ವರ್ಮಾ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಚಿತ್ರ ತಂಡದೊಂದಿಗೆ ಸೇರಿಕೊಂಡಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.