ETV Bharat / sitara

ಫೋಟೋ ನೋಡಿ ಇವರೇ ಅಪ್ಪ-ಅಮ್ಮ ಎಂದು ಕಂಡು ಹಿಡಿದ ರಾಕಿಂಗ್ ಸ್ಟಾರ್ ಪುತ್ರಿ ಐರಾ..! - ರಾಧಿಕಾ ಪಂಡಿತ್

ಐರಾ 8 ತಿಂಗಳ ಮಗುವಾಗಿದ್ದಾಗ ತೆಗೆದ ವಿಡಿಯೋವೊಂದನ್ನು ರಾಧಿಕಾ ಪಂಡಿತ್​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐರಾ, ಯಶ್​​-ರಾಧಿಕಾ ಪೋಟೋ ನೋಡಿ ಇವರೇ ಅಪ್ಪ-ಅಮ್ಮ ಎಂದು ಕಂಡುಹಿಡಿದಿದ್ದಾಳೆ.

ರಾಕಿಂಗ್ ಸ್ಟಾರ್ ಪುತ್ರಿ ಐರಾ
author img

By

Published : Oct 2, 2019, 3:12 PM IST

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಬಣ್ಣದ ಲೋಕದಿಂದ ಕರಿಯರ್ ಆರಂಭಿಸಿದಾಗಿನಿಂದ ಸ್ಟಾರ್​​ಗಳಾಗುವವರೆಗೂ ಜೊತೆಗಿದ್ದ ಜೋಡಿ ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ದಂಪತಿಗೆ ಐರಾ ಎಂಬ ಮುದ್ದು ಮಗುವಿದ್ದು, ಇದೀಗ ರಾಧಿಕಾ ಶೀಘ್ರದಲ್ಲೇ ಎರಡನೇ ಮಗುವಿಗೆ ತಾಯಿಯಾಗಲಿದ್ದಾರೆ.

  • " class="align-text-top noRightClick twitterSection" data="">

ಸದ್ಯಕ್ಕೆ ಯಶ್​​​-ರಾಧಿಕಾ ಪುತ್ರಿ ಐರಾ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿಯಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ. ಯಶ್ ಹಾಗೂ ರಾಧಿಕಾ ಇಬ್ಬರೂ ತಮ್ಮ ಪುತ್ರಿಯ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್​​​​ಲೋಡ್​ ಮಾಡುತ್ತಿರುತ್ತಾರೆ. ಐರಾಗೆ ಈಗ 10 ತಿಂಗಳು ತುಂಬಿದ್ದು, ಮಗು 8 ತಿಂಗಳು ಇದ್ದಾಗ ತೆಗೆದ ವಿಡಿಯೋವೊಂದನ್ನು ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ತಾಯಿ ಕೊಂಕಣಿ ಭಾಷೆಯಲ್ಲಿ ಐರಾಳನ್ನು ಮಾತನಾಡಿಸಿ ಯಶ್​, ರಾಧಿಕಾ ಫೋಟೋ ತೋರಿಸಿ ಅಪ್ಪ, ಅಪ್ಪ ಎಲ್ಲಿ ಎಂದು ಕೇಳುತ್ತಾರೆ. ಅಜ್ಜಿಯ ಮಾತನ್ನು ಅರ್ಥ ಮಾಡಿಕೊಂಡ ಐರಾ, ಯಶ್ ಹಾಗೂ ರಾಧಿಕಾರನ್ನು ಫೋಟೋದಲ್ಲಿ ತೋರಿಸುತ್ತಾಳೆ. ಈ ಮುದ್ದಾದ ವಿಡಿಯೋವನ್ನು ರಾಧಿಕಾ ತಮ್ಮ ಫೇಸ್​​​​ಬುಕ್​​​ನಲ್ಲಿ ಹಂಚಿಕೊಂಡಿದ್ದಾರೆ. ಯಶ್​​ ಹಾಗೂ ರಾಧಿಕಾ ಅಭಿಮಾನಿಗಳು ಈ ವಿಡಿಯೋವನ್ನು ಬಹಳ ಇಷ್ಟಪಟ್ಟಿದ್ದಾರೆ.

Intro:ಒಂಬತ್ತು ತಿಂಗಳಿಗೆ ಇವ್ರೇ ಅಪ್ಪ ಅಮ್ಮ ಅಂದ್ಲು ರಾಕಿಂಗ್ ಸ್ಟಾರ್ ಮುದ್ದಿನ ಮಗಳು!

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್.. ಸದ್ಯ ಮಗಳು ಐರಾ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಳೆ..ಆಗಾಗ ಮಗಳ ಐರಾ ಜೊತೆ ಯಶ್ ಟೈಂ ಕಳೆಯುತ್ತಾರೆ.. ಇದೀಗ ಪೋಟೋದಲ್ಲಿರುವ,ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವ್ರನ್ನ ಗುರುತು ಹಿಡಿಯುತ್ತಿದ್ದಾಳೆ‌‌..ಈಗ ಗಡ್ಡದಲ್ಲಿರುವ ಯಶ್ ಅವ್ರನ್ನ ಮಗಳು ಗಡ್ಡ ಇಲ್ಲದೆ ಅಪ್ಪ ಅಂತಾ ಫೋಟೋ ತೋರಿಸುತ್ತಿರುವ ಕ್ಯೂಟ್ ವಿಡಿಯೋ ಇದಾಗಿದೆ..ರಾಧಿಕಾ ಪಂಡಿತ್ ತುಳು ಭಾಷೆಯಲ್ಲಿ ಮಗಳು ಐರಾಗೆ ಎಲ್ಲಿ ಅಪ್ಪ ಅಂತಾ ಕೇಳುತ್ತಿದ್ದಾಗ, ಐರಾ ಫೋಟೋ ಮುಂದೆ ಕೂತು ಇವ್ರೇ ಅಪ್ಪ ಅಮ್ಮ ಅಂತಾ ಇದ್ದಾಳೆ..Body:ಒಂಬತ್ತು ತಿಂಗಳು ಆಗಿರುವ ಐರಾ ಹತ್ತನೇ ತಿಂಗಳಿಗೆ ಕಾಲಿಟ್ಟಿದ್ದಾಳೆ‌‌..ಈ ಮುದ್ದಾದ ವಿಡಿಯೋವನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ..ಹಾಗೇ ಎರಡನೇ ಮಗವಿನ ನಿರೀಕ್ಷೆಯಲ್ಲಿ ಯಶ್ ದಂಪತಿಗಳು ಇದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.