ETV Bharat / sitara

'ಶ್ರೀರಂಗ' ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ರಾಕ್​ಲೈನ್ ವೆಂಕಟೇಶ್​ - Producer Rock Line Venkatesh

'ಶ್ರೀರಂಗ' ಚಿತ್ರದ ಶೀರ್ಷಿಕೆ ಇತ್ತೀಚೆಗೆ ನಟ ಹಾಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಬಿಡುಗಡೆಗೊಳಿಸಿದರು.

Rock Line Venkatesh released the title of the movie 'Sriranga'
'ಶ್ರೀರಂಗ' ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ರಾಕ್​ಲೈನ್ ವೆಂಕಟೇಶ್​
author img

By

Published : Mar 8, 2021, 12:15 PM IST

ವೆಂಕಟ್ ಭಾರದ್ವಾಜ್ ನಿರ್ದೇಶನದ ವಿನೂತನ ಕಾಮಿಡಿ ಚಿತ್ರ 'ಶ್ರೀರಂಗ' ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ನಟ ಹಾಗು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಬಿಡುಗಡೆಗೊಳಿಸಿದರು.

'ಶ್ರೀರಂಗ' ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ರಾಕ್​ಲೈನ್ ವೆಂಕಟೇಶ್​

'ಶ್ರೀರಂಗ' ಈಗಿನ ಪೋಸ್ಟ್ ಕೋವಿಡ್ ಸಮಯಕ್ಕೆ ಸರಿಯಾದ ಮನರಂಜನಾ ಚಿತ್ರ ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ. ಶ್ರೀರಂಗ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಬೆಂಗಳೂರು ಮತ್ತು ನಗರದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ 3 ಕಾಮಿಡಿ ಸಾಂಗ್​ಗಳಿದ್ದು, ಸಮೀರ್ ಕುಲಕರ್ಣಿ ಅವರ ಸಂಗೀತವಿದೆ. ಮಿಥುನ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ಚಂದನ್ ಸಂಕಲನ ಮಾಡಿದ್ದಾರೆ. ಕನ್ನಡದ ರ್ಯಾಪರ್ ವಿರಾಜ್ ಕನ್ನಡಿಗ ಈ ಚಿತ್ರಕ್ಕೆ ಇಂಟ್ರೊಡಕ್ಷನ್ ಹಾಡು ಬರೆದು, ಹಾಡಿದ್ದಾರೆ.

ಓದಿ: ಬಾಲಿವುಡ್​ ನಟ-ನಟಿಯರ ಸುತ್ತಾಟ: ಕ್ಯಾಮರಾ ಕಣ್ಣಿಗೆ ಬಿದ್ದ ಸೆಲೆಬ್ರಿಟಿಗಳನ್ನು ನೋಡಿ

ಈ ಚಿತ್ರ ಆಗಸ್ಟ್​ನಲ್ಲಿ ತೆರೆಕಾಣಲಿದ್ದು, ವೆಂಕಟ್ ಭಾರದ್ವಾಜ್ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ವೇಳೆ ನಿರ್ಮಾಪಕರಾದ ಶ್ರೀಮತಿ ಸುಮಾ ದಿಲೀಪ್​, ತಮಿಳು ಚಿತ್ರದ ನಿರ್ಮಾಪಕ ಶೇಖರ್ ಜಯರಾಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.