ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದ್ಧೂರಿಯಾಗಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿತ್ತು.
ರಾಬರ್ಟ್ ಸಿನಿಮಾ ಒಂದು ವಾರಕ್ಕೆ ಬರೋಬ್ಬರಿ 78.36 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ಅಧ್ಯಾಯ ಬರೆದಿತ್ತು. ಈ ಸಕ್ಸಸ್ ಖುಷಿಯನ್ನ ಹಂಚಿಕೊಳ್ಳಲು ನಿಮ್ಮ ಊರಿಗೆ ಬರಲು ರಾಬರ್ಟ್ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಹೌದು, ರಾಬರ್ಟ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ಮಾಡಿ ಅಭಿಮಾನಿಗಳನ್ನು ಚಿತ್ರತಂಡ ಭೇಟಿ ಮಾಡಿತ್ತು. ಈಗ ರಾಬರ್ಟ್ ಸಿನಿಮಾದ ವಿಜಯಯಾತ್ರೆ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ.
ಅಭಿಮಾನಿಗಳಿಗೆ ಧನ್ಯವಾದ ಹೇಳೋದಿಕ್ಕೆ 4 ದಿನಗಳ ಕಾಲ ಬೇರೆ ಬೇರೆ ಜಿಲ್ಲೆಗಳಿಗೆ ವಿಜಯಯಾತ್ರೆ ನಡೆಸಲಿದೆ. ಇದೇ ಮಾರ್ಚ್ 29ರಿಂದ ಶುರುವಾಗುವ ವಿಜಯಯಾತ್ರೆ ಏಪ್ರಿಲ್ 1ರವರೆಗೂ ನಡೆಯಲಿದೆ. ಮಾರ್ಚ್ 29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ಡಿಬಾಸ್ ಟೀಂ ಪ್ರಯಾಣ ಬೆಳಸಲಿದೆ. 30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಭೇಟಿ ನೀಡಲಿದೆ.
ಮಾರ್ಚ್ 31ರಂದು ಶಿವಮೊಗ್ಗ, ಹಾಸನ, ತಿಪಟೂರಿಗೆ ಬರಲಿದೆ. ಇನ್ನು ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ ಹಾಗೂ ಮದ್ದೂರಿಗೆ ರಾಬರ್ಟ್ ಚಿತ್ರತಂಡ ಭೇಟಿ ನೀಡಲಿದೆ. ದರ್ಶನ್ ನೋಡಬೇಕು ಅಂದುಕೊಂಡಿರುವ ಅಭಿಮಾನಿಗಳಿಗೆ ನಿಮ್ಮೂರಿನಲ್ಲಿ ರಾಬರ್ಟ್ ನೋಡುವ ಸುವರ್ಣ ಅವಕಾಶ ಸಿಗಲಿದೆ.