'ರಾಬರ್ಟ್' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಹಿಟ್ ಸಿನಿಮಾ. ಆ್ಯಕ್ಷನ್, ಪಂಚಿಂಗ್ ಡೈಲಾಗ್ ಹಾಗೂ ಕಿಕ್ ಕೊಡುವ ಹಾಡುಗಳಿಂದಲೇ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ರೆಕಾರ್ಡ್ ಮಾಡಿದೆ. ಆದರೆ, ಸಿನಿಮಾ ರಿಲೀಸ್ ಆಗಿ ಮೂರು ತಿಂಗಳಾದರೂ ಈ ಚಿತ್ರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅದಕ್ಕೆ ಸಾಕ್ಷಿ ರಾಬರ್ಟ್ ಚಿತ್ರದ ಹಾಡು ಯೂಟ್ಯಬ್ನಲ್ಲಿ ಹೊಸ ದಾಖಲೆ ಬರೆದಿರುವುದು.
- https://m.youtube.com/watch?v=PyrbIANon98Conclusion:
ಹೌದು, ರಾಬರ್ಟ್ ಚಿತ್ರದ 'ಕಣ್ಣು ಹೊಡೆಯಾಕ' ಎಂಬ ಉತ್ತರ ಕರ್ನಾಟಕದ ಸೊಗಡಿನ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದು ಸುಳ್ಳಲ್ಲ. ಈ ಹಾಡು ಬಿಡುಗಡೆ ಆದ ಕೆಲವು ದಿನಗಳಲ್ಲಿ ಯುಟ್ಯೂಬ್‌ನಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಆಗ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ 'ಕಣ್ಣು ಹೊಡಿಯಾಕ ಹಾಡು 20 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಮೊದಲ ಬಾರಿಗೆ ನಾನು ಉತ್ತರ ಕರ್ನಾಟಕದ ಶೈಲಿಯಲ್ಲಿ ಈ ಹಾಡು ಹಾಡಿದ್ದೇನೆ. ಎಂತಹ ಸುಂದರವಾದ ಭಾಷೆ ಇದು. ಈ ಹಾಡಿನಿಂದ ನಾನು ತುಂಬ ಖುಷಿಪಟ್ಟಿದ್ದೇನೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಾಡು ಬರೆದ ಯೋಗರಾಜ್ ಭಟ್, ನಟ ದರ್ಶನ್, ನಟಿ ಆಶಾ ಭಟ್ ಅವರಿಗೆ ನನ್ನ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.
-
Congratulations For The #Roberrt Team For Crossing
— aanandaaudio (@aanandaaudio) June 2, 2021 " class="align-text-top noRightClick twitterSection" data="
50 Million + Views For #KannuHodiyaka Video Song On #AnandAudio
Watch Here ▶ https://t.co/NmWgmBuSGF ◀#DBoss #ChallengingStar @dasadarshan @TharunSudhir @UmapathyFilms @StarAshaBhat @shreyaghoshal @ArjunJanyaMusic pic.twitter.com/qWEFG8ieNo
">Congratulations For The #Roberrt Team For Crossing
— aanandaaudio (@aanandaaudio) June 2, 2021
50 Million + Views For #KannuHodiyaka Video Song On #AnandAudio
Watch Here ▶ https://t.co/NmWgmBuSGF ◀#DBoss #ChallengingStar @dasadarshan @TharunSudhir @UmapathyFilms @StarAshaBhat @shreyaghoshal @ArjunJanyaMusic pic.twitter.com/qWEFG8ieNoCongratulations For The #Roberrt Team For Crossing
— aanandaaudio (@aanandaaudio) June 2, 2021
50 Million + Views For #KannuHodiyaka Video Song On #AnandAudio
Watch Here ▶ https://t.co/NmWgmBuSGF ◀#DBoss #ChallengingStar @dasadarshan @TharunSudhir @UmapathyFilms @StarAshaBhat @shreyaghoshal @ArjunJanyaMusic pic.twitter.com/qWEFG8ieNo
ಇದೀಗ ಇದೇ ಹಾಡು ಯೂಟ್ಯೂಬ್ನಲ್ಲಿ 50 ಮಿಲಿಯನ್ ಜನ ನೋಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ವಿಷಯವನ್ನು ಆನಂದ್ ಆಡಿಯೋ ಸಂಸ್ಥೆ ಹಂಚಿಕೊಂಡಿದ್ದು, ಇಡೀ ರಾಬರ್ಟ್ ಚಿತ್ರತಂಡಕ್ಕೆ ಅಭಿನಂದನೆ ಹೇಳಿದೆ. ಕಣ್ಣು ಹೊಡಿಯಾಕ ಹಾಡು ಈಗ 50 ಮಿಲಿಯನ್ ಜನ ನೋಡುವ ಮುಖಾಂತರ ಮತ್ತೊಂದು ದಾಖಲೆ ಬರೆದಿದೆ.