ಶಂಕರ್ ನಾಗ್ ಅಭಿನಯದ 'ನೋಡಿ ಸ್ವಾಮಿ ನಾವಿರೋದು ಹೀಗೆ' ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು. ಹೆಸರಿನಿಂದ ಮೇಕಿಂಗ್ವರೆಗೂ ಹಲವು ವಿಭಿನ್ನತೆ ಹೊಂದಿರುವ ಚಿತ್ರಕ್ಕೆ ಇಂದಿಗೂ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಬಹುತೇಕ ಇದೇ ತರಹದ ಟೈಟಲ್ ಇರುವ ಇನ್ನೊಂದು ಸಿನಿಮಾ ಸುದ್ದಿಯಲ್ಲಿದೆ. ಆ ಸಿನಿಮಾದ ಹೆಸರೇ 'ನೋಡಿ ಸ್ವಾಮಿ ಇವನು ಇರೋದೇ ಹೀಗೆ'.
-
When you forget the taste of sweetness; bitter becomes sweet.
— Rishi (@Rishi_vorginal) June 21, 2021 " class="align-text-top noRightClick twitterSection" data="
Presenting
ನೋಡಿ ಸ್ವಾಮಿ ಇವನು ಇರೋದೆ ಹೀಗೆ
in Kannada.
వద్దురా సోదరా
in Telugu. #NodiSwamyIvanuIrodeHeege#VadduraSodharaa@DheeMogilineni #AmrejSuryavanshi @IslahuddinNS@DhanyaBee pic.twitter.com/Ir39sx2vwO
">When you forget the taste of sweetness; bitter becomes sweet.
— Rishi (@Rishi_vorginal) June 21, 2021
Presenting
ನೋಡಿ ಸ್ವಾಮಿ ಇವನು ಇರೋದೆ ಹೀಗೆ
in Kannada.
వద్దురా సోదరా
in Telugu. #NodiSwamyIvanuIrodeHeege#VadduraSodharaa@DheeMogilineni #AmrejSuryavanshi @IslahuddinNS@DhanyaBee pic.twitter.com/Ir39sx2vwOWhen you forget the taste of sweetness; bitter becomes sweet.
— Rishi (@Rishi_vorginal) June 21, 2021
Presenting
ನೋಡಿ ಸ್ವಾಮಿ ಇವನು ಇರೋದೆ ಹೀಗೆ
in Kannada.
వద్దురా సోదరా
in Telugu. #NodiSwamyIvanuIrodeHeege#VadduraSodharaa@DheeMogilineni #AmrejSuryavanshi @IslahuddinNS@DhanyaBee pic.twitter.com/Ir39sx2vwO
ಆಪರೇಷನ್ ಅಲಮೇಲಮ್ಮ, ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಗಳ ಖ್ಯಾತಿಯ ರಿಷಿ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಸೋಮವಾರ ರಿಷಿ ಅವರ ಹುಟ್ಟುಹಬ್ಬವಾದ ಕಾರಣ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿದೆ. ಲಾಕ್ಡೌನ್ಗೂ ಮುನ್ನವೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಬಹುತೇಕ ಮುಗಿದಿದೆ. ಇದೀಗ ಬಾಕಿಯಿರುವ ಕೆಲಸಗಳನ್ನು ಸಾಧ್ಯವಾದಷ್ಟೂ ಬೇಗ ಮುಗಿಸಿ, ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ.
ಈ ಚಿತ್ರ ಕನ್ನಡವಷ್ಟೇ ಅಲ್ಲ, ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಚಿತ್ರಕ್ಕೆ 'ನೋಡಿ ಸ್ವಾಮಿ ಇವನು ಇರೋದೇ ಹೀಗೆ' ಎಂಬ ಹೆಸರಿದ್ದರೆ, ತೆಲುಗಿನಲ್ಲಿ ಚಿತ್ರಕ್ಕೆ 'ವದ್ದುರಾ ಸೋದರಾ' ಎಂಬ ಹೆಸರನ್ನು ಇಡಲಾಗಿದೆ.
ಈ ಹಿಂದೆ ಆಪರೇಷನ್ ಅಲಮೇಲಮ್ಮ ಚಿತ್ರವನ್ನು ನಿರ್ಮಿಸಿದ್ದ ಅಮ್ರೇಜ್ ಸೂರ್ಯವಂಶಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಎನ್.ಎಸ್ ಇಸ್ಲಾಹುದ್ದೀನ್ ನಿರ್ದೇಶನದ ಚೊಚ್ಚಲ ಸಿನಿಮಾ. ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿದ್ದ ಧನ್ಯಾ ಬಾಲಕೃಷ್ಣ ಈ ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಗ್ರೀಷ್ಮಾ ಶ್ರೀಧರ್, ನಾಗಭೂಷಣ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಎಡವಟ್ಟು ಮಾಡ್ತಾ Google?.. ತಮಿಳು ಚಿತ್ರದಲ್ಲಿ ನಟಿಸಿದ್ದಾರಂತೆ ಅಣ್ಣಾವ್ರು..