ಕಂಟೆಂಟ್ ಸಿನಿಮಾಗಳ ಮುಖಾಂತರ ಸೌಂಡ್ ಮಾಡ್ತಿರೋ ಬಹುಮುಖ ಪ್ರತಿಭೆ ನಿರ್ದೇಶಕ ರಿಶಬ್ ಶೆಟ್ಟಿ, ಸದ್ಯ ಸ್ಯಾಂಡಲ್ ವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 'ರುದ್ರಪ್ರಯಾಗ' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿರುವ ರಿಶಭ್, ಸದ್ದಿಲ್ಲದೆ ಸ್ಯಾಂಡಲ್ವುಡ್ನಿಂದ ಬಾಲಿವುಡ್ಗೆ ಹಾರೋಕೆ ರೆಡಿಯಾಗಿದ್ದಾರೆ.
ಅತಿ ಶೀಘ್ರದಲ್ಲೇ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ರಿಶಬ್ ಶೆಟ್ಟಿ ಹೇಳಿದರು. ವಿಶೇಷ ಅಂದ್ರೆ, 'ರುದ್ರಪ್ರಯಾಗ' ಹಿಂದಿ ಅವತರಣಿಕೆಯಲ್ಲಿ ಅನಂತನಾಗ್ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದಾರೆ. ಅನಂತ್‌ನಾಗ್ ಜೊತೆ ಗುಲ್ ಶನ್ ದೇವಯ್ಯ ತೆರೆ ಹಂಚಿಕೊಳ್ತಿದ್ದು ಸಿನಿಮಾ ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಹಿಂದಿಯಲ್ಲೂ ಶೂಟ್ ಮಾಡಲು ಸಿದ್ದತೆ ಮಾಡಿರುವುದಾಗಿ ಅವರು ಹೇಳಿದ್ರು.