ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ರಿಷಬ್, ಸದ್ದಿಲ್ಲದೆ ಒಂದು ಕಥೆ ಮಾಡಿಟ್ಟುಕೊಂಡು ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಅದನ್ನು ಸಿನಿಮಾ ಮಾಡಿದ್ದರು, ಅದೇ ಹೀರೋ. ಈ ಬಾರಿ ಸಹ ರಿಷಬ್ ಅದನ್ನೇ ರಿಪೀಟ್ ಮಾಡುತ್ತಿದ್ದಾರೆ.
-
ಹೇಳೋಕೊಂದು ಕಥೆ ಸಿಕ್ಕಾಯ್ತು... ಇನ್ನು ಮಾಡೋದೊಂದೆ ಬಾಕಿ. 😉 ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ ,🙏😍#BacktoDirection
— Rishab Shetty (@shetty_rishab) June 21, 2021 " class="align-text-top noRightClick twitterSection" data="
">ಹೇಳೋಕೊಂದು ಕಥೆ ಸಿಕ್ಕಾಯ್ತು... ಇನ್ನು ಮಾಡೋದೊಂದೆ ಬಾಕಿ. 😉 ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ ,🙏😍#BacktoDirection
— Rishab Shetty (@shetty_rishab) June 21, 2021ಹೇಳೋಕೊಂದು ಕಥೆ ಸಿಕ್ಕಾಯ್ತು... ಇನ್ನು ಮಾಡೋದೊಂದೆ ಬಾಕಿ. 😉 ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ ,🙏😍#BacktoDirection
— Rishab Shetty (@shetty_rishab) June 21, 2021
ಈ ಕುರಿತು ಟ್ವೀಟ್ ಮಾಡಿರುವ ಅವರು, ಹೇಳೋಕೊಂದು ಕಥೆ ಸಿಕ್ಕಾಯ್ತು. ಇನ್ನು ಮಾಡೋದೊಂದೇ ಬಾಕಿ. ನಿಮ್ಮೆಲ್ಲರ ಪ್ರೀತಿ ಇರಲಿ. ಬ್ಯಾಕ್ ಟು ಡೈರೆಕ್ಷನ್ ಎಂದು ಹೇಳಿಕೊಂಡಿದ್ದಾರೆ. ಕಳೆದ ಬಾರಿ ರಿಷಬ್ ಬರೀ ನಿರ್ಮಾಣ ಮತ್ತು ನಟನೆ ಮಾತ್ರ ಮಾಡಿದ್ದರು. ಈ ಬಾರಿ ಅವರು ನಿರ್ದೇಶನಕ್ಕೆ ವಾಪಸ್ಸಾಗುತ್ತಿರುವುದು ವಿಶೇಷ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ನಂತರ ರಿಷಭ್ ನಿರ್ದೇಶನ ಮಾಡಿರಲಿಲ್ಲ. ಬರೀ ನಟನೆಯಲ್ಲೇ ಬ್ಯುಸಿಯಾಗಿದ್ದ ಅವರು, ಇದೀಗ ಈ ಹೊಸ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
ಇದೊಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧದ ಚಿತ್ರವಾಗಿರಲಿದೆಯಂತೆ. ಈ ಗಂಭೀರವಾದ ವಿಷಯವನ್ನು ರಿಷಬ್, ಗಂಭೀರವಾಗಿ ಹೇಳುತ್ತಾರೋ ಅಥವಾ ತಮ್ಮದೇ ಕಾಮಿಡಿ ಶೈಲಿಯಲ್ಲಿ ಹೇಳುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಎಲ್ಲರೂ ಮುಂದಿನ ಪ್ರಕಟಣೆಗಾಗಿ ಕಾಯುತ್ತಿದ್ದಾರೆ.
ಈಗಾಗಲೇ ಕಥೆ ಪಕ್ಕಾ ಮಾಡಿಟ್ಟುಕೊಂಡಿರುವ ರಿಷಭ್, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರ ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗುವ ಸಾಧ್ಯತೆ ಇದೆ, ಅಷ್ಟರಲ್ಲಿ ತಮ್ಮ ಹಳೆಯ ಕಮಿಟ್ಮೆಂಟ್ಗಳನ್ನು ಮುಗಿಸಿಕೊಂಡು ಮತ್ತೆ ಆಕ್ಷನ್-ಕಟ್ ಹೇಳುವುದಕ್ಕೆ ರಿಷಭ್ ತಯಾರಾಗಲಿದ್ದಾರೆ.
ಇದನ್ನೂ ಓದಿ: ನಟ ರಿಷಿ ಹುಟ್ಟುಹಬ್ಬದಂದು ಹೊಸ ಸಿನಿಮಾದ ಟೈಟಲ್ ರಿಲೀಸ್