ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಅಂಗವಾಗಿ ಇಂದು 'ರೈಡರ್' ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಬರ್ತ್ಡೇ ಗಿಫ್ಟ್ ನೀಡಿದೆ. ನಿಖಿಲ್ ಮೊದಲ ಚಿತ್ರ 'ಜಾಗ್ವಾರ್', 'ಕುರುಕ್ಷೇತ್ರ' ಎರಡೂ ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಇದೀಗ ರೈಡರ್ ಕೂಡಾ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: ಮಗು ಜನನದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರುಷ್ಕಾ: ವಿಡಿಯೋ ನೋಡಿ
ತೆಲುಗಿನಲ್ಲಿ ಕೂಡಾ ಈ ಸಿನಿಮಾ ರೈಡರ್ ಹೆಸರಿನಲ್ಲೇ ತಯಾರಾಗುತ್ತಿದೆ. ಇಂದು ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್ನಲ್ಲಿ ಒಂದಿಷ್ಟು ಬೆರಗು ಹುಟ್ಟಿಸುವ ಆ್ಯಕ್ಷನ್ ದೃಶ್ಯಗಳಿವೆ. ಯೂಟ್ಯೂಬ್‍ನ ಲಹರಿ ಫಿಲ್ಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಈ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೊನೆಯಲ್ಲಿ ಈ ಸಿನಿಮಾ ಕನ್ನಡದೊಂದಿಗೆ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗುತ್ತಿರುವ ವಿಷಯವನ್ನು ತಿಳಿಸಲಾಗಿದೆ. 'ರೈಡರ್' ಸಿನಿಮಾ ಕಳೆದ ವರ್ಷದ ಆರಂಭದಲ್ಲೇ ಶುರುವಾಗಿತ್ತು. ಲಾಕ್‍ಡೌನ್‍ಗೂ ಮುಂಚೆಯೇ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಕೂಡಾ ಆಗಿತ್ತು. ಆದರೆ, ಲಾಕ್‍ಡೌನ್‍ನಿಂದ ಚಿತ್ರೀಕರಣ ನಿಂತಿದ್ದು, ಸದ್ಯದಲ್ಲೇ ಮತ್ತೆ ಪ್ರಾರಂಭವಾಗಲಿದೆ. ಚಿತ್ರದಲ್ಲಿ ನಿಖಿಲ್‍ಗೆ ನಾಯಕಿಯಾಗಿ ಕಾಶ್ಮೀರಾ ಅಭಿನಯಿಸುತ್ತಿದ್ದು ಇವರೊಂದಿಗೆ ದತ್ತಣ್ಣ, ಅಚ್ಯುತ್‍ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಅನುಷಾ ರೈ, ಸಂಪದ ಹುಲಿವಾನ, ರಾಜೇಶ್ ನಟರಂಗ ಮುಂತಾದವರು ನಟಿಸುತ್ತಿದ್ದಾರೆ. ವಿಜಯ್‍ಕುಮಾರ್ ಕೊಂಡಾ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಲಹರಿ ಮೂವೀಸ್‍ನಡಿ ಚಂದ್ರ ಮನೋಹರನ್ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
