ETV Bharat / sitara

ಅ. 6ರವರೆಗೆ ರಿಯಾ ನ್ಯಾಯಾಂಗ ಬಂಧನದಲ್ಲಿ.. ನಾಳೆ ಜಾಮೀನು ಅರ್ಜಿ ವಿಚಾರಣೆ - ನಟ ಸುಶಾಂತ್‌ ಸಿಂಗ್ ರಜಪೂತ್‌ ಆತ್ಮಹತ್ಯೆ ಕೇಸ್​

ಬಾಲಿವುಡ್​ ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಮತ್ತಷ್ಟು ವಿಚಾರಣೆಗೆ ಒಳಪಡಿಸಲಿದೆ.

Actor Rhea Chakraborty
Actor Rhea Chakraborty
author img

By

Published : Sep 22, 2020, 3:04 PM IST

ಮುಂಬೈ: ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಹಾಗೂ ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಅಕ್ಟೋಬರ್​​ 6ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

ರಿಯಾ ನ್ಯಾಯಾಂಗ ಬಂಧನ ಮುಕ್ತಾಯಗೊಂಡ ಕಾರಣ ಹೆಚ್ಚಿನ ವಿಚಾರಣೆಗೋಸ್ಕರ ಮಾದಕ ವಸ್ತು ನಿಯಂತ್ರಣ ಸಂಸ್ಥೆ ಅವರನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಲಿದೆ. ಈ ಮಧ್ಯೆ ಬಾಂಬೆ ಹೈಕೋರ್ಟ್​​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರಿಂದ ನಾಳೆ ವಿಚಾರಣೆ ನಡೆಯಲಿದೆ.

ಡ್ರಗ್ಸ್​ ಪ್ರಕರಣದಲ್ಲಿ ಶ್ರದ್ಧಾ ಕಪೂರ್​, ಸಾರಾ ಅಲಿ ಖಾನ್​ ಸೇರಿದಂತೆ ಅನೇಕರ ಹೆಸರು ಈಗಾಗಲೇ ಕೇಳಿ ಬಂದಿದ್ದು, ಅವರಿಗೂ ನೋಟಿಸ್​ ಜಾರಿಗೊಳುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಎನ್​ಸಿಬಿ ವಶದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ಮುಂದುವರೆದಿದೆ. ಇದರ ಜತೆಗೆ ರಿಯಾ ಸಹೋದರ ಶೋವಿಕ್​ ಚಕ್ರವರ್ತಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. 34 ವರ್ಷದ ನಟ ಸುಶಾಂತ್​ ಸಿಂಗ್​ ರಜಪೂತ್​​ ಜೂನ್​ 14ರಂದು ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.