ಹೊಸ ವರ್ಷಕ್ಕೆ ಸ್ಯಾಂಡಲ್ವುಡ್ ನಟರ ಸಿನಿಮಾಗಳ ಪೋಸ್ಟರ್ಗಳು ರಾರಾಜಿಸಿದ್ದವು. ಈಗ ಸ್ಟೈಲಿಷ್ ಲುಕ್ ಹಾಗೂ ಮಾಸ್ ಕಿಕ್ ಇರುವ 'ರೇಮೊ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. 'ರೋಗ್' ಸಿನಿಮಾ ಖ್ಯಾತಿಯ ಇಶಾನ್ ನಟಿಸುತ್ತಿರುವ 'ರೇಮೊ' ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="">
'ವಿಲನ್'ನಂತಹ ದೊಡ್ಡ ಬಜೆಟ್ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಸಿ.ಆರ್.ಮನೋಹರ್ ಹಾಗೂ ಸ್ಟೈಲಿಷ್ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಪವನ್ ಒಡೆಯರ್ ಕಾಂಬಿನೇಷನ್ ಚಿತ್ರ ಇದಾಗಿದೆ. ಚಿತ್ರದಲ್ಲಿ ಇಶಾನ್ ನಾಯಕನಾಗಿ ನಟಿಸುತ್ತಿದ್ದು, ಈ 6 ಅಡಿ ಹ್ಯಾಂಡ್ಸಮ್ ಹುಡುಗನಿಗೆ ಚೆಂದದ ಹುಡುಗಿ ಅಶಿಕಾ ರಂಗನಾಥ್ ಜೊತೆಯಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಬಹಳ ಆಕರ್ಷಕವಾಗಿದೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುವ ಸೂಚನೆ ನೀಡುತ್ತಿದೆ. ಸ್ಯಾಂಡಲ್ವುಡ್ಗೆ ಮತ್ತೊಬ್ಬ ಹ್ಯಾಂಡ್ಸಮ್ ಹೀರೋ ಸಿಗುವ ಸೂಚನೆ ಕೂಡಾ ಸಿಕ್ಕಿದೆ.

ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಚಿತ್ರದ ಹಾಡು ಕೂಡಾ ಹಿಟ್ ಸಾಂಗ್ಗಳ ಸಾಲಿಗೆ ಸೇರುವ ಭರವಸೆ ಇದೆ. 'ಗೂಗ್ಲಿ'ಯಂತಹ ಸಿನಿಮಾ ನಿರ್ದೇಶಿಸಿದ್ದ ಪವನ್ ಒಡೆಯರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಗೆಲ್ಲುವ ತವಕದಲ್ಲಿದ್ದಾರೆ. ನಾಯಕ ನಟ ಇಶಾನ್, ನಿರ್ಮಾಪಕ ಸಿ.ಆರ್.ಮನೋಹರ್ ಅವರ ಸಂಬಂಧಿ ಆಗಿದ್ದು, ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
