ಕನ್ನಡ ಚಿತ್ರರಂಗದ ಶೋ ಮ್ಯಾನ್, ಕನಸುಗಾರ, ರಣಧೀರ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಏಕೈಕ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಸದ್ಯ ರವಿ ಬೋಪಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿರುವ ರವಿಮಾಮ ಈ ಯುಗಾದಿ ಹಬ್ಬದಂದ 'ಒನ್ ಅಂಡ್ ಒನ್ಲಿ ರವಿಚಂದ್ರನ್' ಹೆಸರಿನಲ್ಲಿ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್‌ಗೆ ರವಿಚಂದ್ರನ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
ಹೌದು, 24 ಗಂಟೆಗಳ ಕಾಲ ಸಿನಿಮಾ ಬಗ್ಗೆ ಯೋಚನೆ ಮಾಡುವ ರವಿಚಂದ್ರನ್ ಈ ಬಣ್ಣದ, ಪ್ರಪಂಚದಲ್ಲಿ ಹಲವು ಏಳು - ಬೀಳುಗಳನ್ನು ಕಂಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಗೀತ ಸಾಹಿತಿಯಾಗಿ, ಹೀಗೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನಸುಗಾರ. ಈ ಯುಗಾದಿ ಹಬ್ಬ ದಿನದಂದು ಸೋಷಿಯಲ್ ಮೀಡಿಯಾಗೆ ಕಾಲಿಟ್ಟಿರುವ ರವಿಚಂದ್ರನ್ ಇಂದು ಸ್ಪೆಷಲ್ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.
- " class="align-text-top noRightClick twitterSection" data="">
'ಕೊರೊನಾ ಹರಡಲು ನೀವು ಕಾರಣರಾಗಬೇಡಿ. ನೀವು ಸುರಕ್ಷಿತರಾಗಿರಿ, ನಿಮ್ಮ ಕುಟುಂಬ ಹಾಗೂ ಸ್ನೇಹಿತರನ್ನು ಸುರಕ್ಷಿತವಾಗಿಡಿ. ಹಾಗೇ ತಂದೆ ವೀರಸ್ವಾಮಿ ಬಗ್ಗೆ ಮತ್ತು ಧೂಮಪಾನ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳ ಜೊತೆಗೆ, ಕುಟುಂಬದ ಮಹತ್ವ ಬಗ್ಗೆ ರವಿಮಾಮ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಇದು ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ರವಿಚಂದ್ರನ್ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ವಿಡಿಯೋಗಳು ನೋಡಬಹುದು.
- " class="align-text-top noRightClick twitterSection" data="">
- " class="align-text-top noRightClick twitterSection" data="">
- " class="align-text-top noRightClick twitterSection" data="">