ETV Bharat / sitara

ಸಂಕ್ರಾಂತಿ ಹಬ್ಬಕ್ಕೆ ಕ್ರೇಜಿಸ್ಟಾರ್​ ಹಾಗೂ ಕಿಚ್ಚ ತಮ್ಮ ಅಭಿಮಾನಿಗಳಿಗೆ ಕೊಟ್ಟ ಸರ್​​ಪ್ರೈಸ್ ಏನು...? - ರವಿ ಬೋಪಣ್ಣ ಮೋಷನ್ ಪೋಸ್ಟರ್ ಬಿಡುಗಡೆ

ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ ರವಿ ಬೋಪಣ್ಣ ಸ್ಯಾಂಡಲ್​​​ವುಡ್​​​​​​​​​​​ ಅಂಗಳದಲ್ಲಿ ಗೆಲ್ಲುವ ಸೂಚನೆ ನೀಡಿದೆ. ಕೋಟಿಗೊಬ್ಬ-3 ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಆಗಿದ್ದು ಶಿವಕಾರ್ತಿಕ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಕಿಚ್ಚ ಮತ್ತೆ ಡಬ್ಬಲ್ ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋದು, ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

Ravichandran, sudeep
ರವಿಚಂದ್ರನ್​, ಸುದೀಪ್
author img

By

Published : Jan 15, 2020, 7:02 PM IST

ಸ್ಯಾಂಡಲ್​​ವುಡ್​​​ನಲ್ಲಿ ಈ ವರ್ಷ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿದೆ. ಸದ್ಯ ಸಂಕ್ರಾಂತಿ ಹಬ್ಬಕ್ಕೆ, ಇಬ್ಬರು ಸ್ಟಾರ್​​​​​​​​ಗಳಾದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಸರ್​​​ಪ್ರೈಸ್ ನೀಡಿದ್ದಾರೆ. ಅಭಿಮಾನಿಗಳಿಗೆ ಮಕರ ಸಂಕ್ರಮಣದ ಖುಷಿ ಜೊತೆಗೆ ತಮ್ಮ ಮೆಚ್ಚಿನ ಸ್ಟಾರ್​​ಗಳ ಸಿನಿಮಾಗಳ ಪೋಸ್ಟರ್ ಬಿಡುಗಡೆಯಾಗಿರುವುದು ಸಂತೋಷ ತಂದಿದೆ.

  • " class="align-text-top noRightClick twitterSection" data="">

ಅದರಲ್ಲಿ ಕಿಚ್ಚ ಸುದೀಪ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಕೋಟಿಗೊಬ್ಬ 3 ಚಿತ್ರದ ಮೋಷನ್ ಪೋಸ್ಟರ್​​​​​​ ರಿವೀಲ್ ಆಗಿರುವುದು. ಕಿಚ್ಚ ಸುದೀಪ್ ತಮ್ಮ ಬಾಯಿಯಲ್ಲಿ ಸಿಗಾರ್ ಹಿಡಿದು, ಸ್ಟೈಲ್​​​​ಲುಕ್​​​ನಲ್ಲಿ ಕಾಣಿಸಿಕೊಂಡಿರುವ ಮೋಷನ್ ಪೋಸ್ಟರ್​​ ಇದಾಗಿದೆ. ಶಿವಕಾರ್ತಿಕ್ ನಿರ್ದೇಶನ ಮಾಡಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಕಿಚ್ಚ ಮತ್ತೆ ಡಬ್ಬಲ್ ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋದು, ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ರಾಮ್​ಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸೂರಪ್ಪ ಬಾಬು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇನ್ನು ಪೋಸ್ಟರ್ ಹಾಗೂ ಲುಕ್​​​​​​ನಿಂದ ಗಮನ ಸೆಳೆದಿರುವ 'ರವಿ ಬೋಪಣ್ಣ' ಚಿತ್ರದ ಅಫಿಶಿಯಲ್ ಟೀಸರ್ ರಿವೀಲ್ ಆಗಿದೆ. ಈ ಟೀಸರ್ ನೋಡುತ್ತಿದ್ದರೆ ಇದು ಸಸ್ಪೆನ್ಸ್ ಕಮ್ ಥ್ರಿಲ್ಲರ್ ಚಿತ್ರ ಎನಿಸುತ್ತದೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ ರವಿ ಬೋಪಣ್ಣ ಸ್ಯಾಂಡಲ್​​​ವುಡ್​​​​​​​​​​​ ಅಂಗಳದಲ್ಲಿ ಗೆಲ್ಲುವ ಸೂಚನೆ ನೀಡಿದೆ. ಮಾಣಿಕ್ಯ ಚಿತ್ರದ ನಂತರ ಸುದೀಪ್, ಏಕಾಂಗಿಗೆ ಸಾಥ್ ನೀಡಿದ್ದಾರೆ ಚಿತ್ರಕಥೆ, ಸಾಹಿತ್ಯ, ಸಂಗೀತ, ಎಡಿಟಿಂಗ್ ಎಲ್ಲವೂ ಕ್ರೇಜಿಸ್ಟಾರ್ ಅವರದ್ದೇ. ರವಿಚಂದ್ರನ್​​​​ ಜೊತೆ ಕಾವ್ಯ ಶೆಟ್ಟಿ, ರಚಿತಾ ರಾಮ್, ಸಂಚಿತಾ ಪಡುಕೋಣೆ ರೊಮ್ಯಾನ್ಸ್ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಅಜಿತ್ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸದ್ಯದಲ್ಲೇ ರವಿಬೋಪಣ್ಣ ತೆರೆ ಮೇಲೆ ಬರಲಿದೆ.

Intro:Body:ಸಂಕ್ರಾಂತಿಗೆ ಹಬ್ಬಕ್ಕೆ ಕ್ರೇಜಿ ಸ್ಟಾರ್ ಹಾಗೂ ಕಿಚ್ಚ ಕೊಟ್ಟ ಸರ್ ಪ್ರೈಸ್ ಏನು!!

ಸ್ಯಾಂಡಲ್ ವುಡ್ ನಲ್ಲಿ ,ಈ ವರ್ಷ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿದೆ..ಸದ್ಯ ಸಂಕ್ರಾಂತಿ ಹಬ್ಬಕ್ಕೆ, ಇಬ್ಬರು ಸ್ಟಾರ್ ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗು ಕಿಚ್ಚ ಸುದೀಪ್ ತಮ್ಮ ಫ್ಯಾನ್ಸ್ ಗೆ ಸರ್ ಪ್ರೈಸ್ ನೀಡಿದ್ದಾರೆ.. ಯಸ್ ಅದ್ರಲ್ಲಿ ಕಿಚ್ಚ ಸುದೀಪ್ ನಟನೆಉ ಈ ವರ್ಷದ ಎಕ್ಸ್ ಫೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರೋ ಕೋಟಿಗೊಬ್ಬ 3 ಚಿತ್ರದ ಮೋಷನ್ ಪಿಕ್ಚರ್ ರಿವೀಲ್ ಆಗಿರೋದು..ಪೈಲ್ವಾನ್ ಬಾಯಲ್ಲಿ ಸಿಗರ್ ಹಿಡಿದು, ಸ್ಟೈಲ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಮೋಷನ್ ಪಿಕ್ಚರ್ ಇದಾಗಿದೆ..ಶಿವಕಾರ್ತಿಕ್ ನಿರ್ದೇಶನ ಮಾಡಿರೋ ಕೋಟಿಗೊಬ್ಬ 3ಯಲ್ಲಿ ಕಿಚ್ಚ ಮತ್ತೆ ಡಬ್ಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋದು, ಕಿಚ್ಚನ ಫ್ಯಾನ್ಸ್ ಗಳಲ್ಲಿ ಕುತೂಹಲ ಹುಟ್ಟಿಸಿದೆ..ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ನಿರೀಕ್ಷಿತ ಚಿತ್ರ ರವಿ ಬೋಪಣ್ಣ.ಪೋಸ್ಟರ್ ಹಾಗು ರವಿಮಾಮನ ಲುಕ್ ನಿಂದ, ಗಮನ ಸೆಳೆದ ರವಿ ಬೋಪಣ್ಣ ಚಿತ್ರದ ಆಫೀಶಿಯಲ್ ಟೀಸರ್ ರಿವೀಲ್ ಆಗಿದೆ..ಈ ಟೀಸರ್ ನೋಡ್ತಾ ಇದ್ರೆ ಸಸ್ಪೆನ್ಸ್ ಕಮ್ ಥ್ರಿಲ್ಲರ್ ಚಿತ್ರವಾಗಿದೆ..ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿರೋ ರವಿ ಬೋಪಣ್ಣ ಸ್ಯಾಂಡಲ್ ವುಡ್ ಅಂಗಳದಲ್ಲಿ ಗೆಲ್ಲುವ ಸೂಚನೆ ನೀಡಿದೆ..ಮಾಣಿಕ್ಯ ಚಿತ್ರದ ನಂತರ ಸುದೀಪ್ ಏಕಾಂಗಿಗೆ ಸಾಥ್ ನೀಡಿದ್ದಾರೆ ಚಿತ್ರಕಥೆ, ಸಾಹಿತ್ಯ, ಸಂಗೀತ, ಎಡಿಟಿಂಗ್, ಪೂರ್ತಿ ಕ್ರೇಜಿ ಸ್ಟಾರ್ ಅವ್ರದ್ದು, ರವಿಮಾನ ಜೊತೆ ಕಾವ್ಯ ಶೆಟ್ಟಿ, ರಚಿತಾ ರಾಮ್, ಸಂಚಿತಾ ಪಡುಕೋಣೆ ರೊಮ್ಯಾನ್ಸ್ ಮಾಡಿದ್ದಾರೆ.. ಪೋಷಕ ಪಾತ್ರಗಳಲ್ಲಿ ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದವರು ಕಾಣಿಸಿಕೊಂಡಿದ್ದಾರೆ.. ಅಜಿತ್ ಎಂಬುವರು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ರವಿಬೋಪಣ್ಣ ತೆರೆ ಮೇಲೆ ಬರಲು ಸಿದ್ದತೆ ನಡೆಸಿದೆ..

https://youtu.be/c_8BtGFmwEQConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.