ಕ್ರೇಜಿಸ್ಟಾರ್ ರವಿಚಂದ್ರನ್ ಸಂಕ್ರಾಂತಿ ಹಬ್ಬಕ್ಕೆ ತನ್ನ ಅಭಿಮಾನಿಗಳಿಗೆ ಒಳ್ಳೆ ಗಿಫ್ಟ್ ಕೊಟ್ಟಿದ್ದಾರೆ. ಹೌದು ಇದೀಗ ರವಿಮಾಮ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಟೀಸರ್ ರಿಲೀಸ್ ಆಗಿದೆ.
ಇದೀಗ ಬಿಡುಗಡೆಯಾಗಿರುವ ಟೀಸರ್ನಲ್ಲಿ ರವಿಚಂದ್ರನ್ ಖಡಕ್ ಗಡ್ಡ ಮೀಸೆ ಬಿಟ್ಟು, ಪಂಚೆಯಲ್ಲಿ ಮಿಂಚಿದ್ದಾರೆ. ಹಾಗೂ ಟೀಸರ್ನ ಬ್ಯಾಗ್ರೌಂಡ್ ಮ್ಯೂಸಿಕ್ ರಗಡ್ ಆಗಿದ್ದು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.
ಆದ್ರೆ ಈ ಟೀಸರ್ ರಿಲೀಸ್ನಿಂದ ಕಿಚ್ಚನ ಅಭಿಮಾನಿಗಳಿ ಕೊಂಚ ಬೇಸರವಾಗಿದೆ. ಯಾಕಂದ್ರೆ ಚಿತ್ರದಲ್ಲಿ ಸುದೀಪ್ ಕೂಡ ಅಭಿನಯಿಸಿದ್ದಾರೆ. ಆದ್ರೆ ಟೀಸರ್ನಲ್ಲಿ ಕಿಚ್ಚನನ್ನು ತೋರಿಸಿಲ್ಲ. ಇನ್ನು ಈ ಸಿನಿಮಾಕ್ಕೆ ರವಿಚಂದ್ರನ್ ಆಕ್ಷನ್ ಕಟ್ ಹೇಳಿದ್ದಾರೆ.
- " class="align-text-top noRightClick twitterSection" data="">