ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶನ ಮಾಡುತ್ತಿರುವ ರವಿಬೋಪಣ್ಣ ಚಿತ್ರದ ಶೂಟಿಂಗ್ ಕಳೆದ ಒಂದು ವಾರದಿಂದ ಮಡಿಕೇರಿಯಲ್ಲಿ ನಡೆಯುತ್ತಿದೆ. ಇದೀಗ ರವಿಮಾಮನ ಅಡ್ಡಕ್ಕೆ ನಾಯಕಿಯಾಗಿ ಕನ್ನಡದ ಸಂಚಿತ ಪಡುಕೋಣೆ ಎಂಟ್ರಿಕೊಟ್ಟಿದ್ದಾರೆ.
![ravi bipanna movie shooting in madikeri](https://etvbharatimages.akamaized.net/etvbharat/prod-images/kn-bng-2-ravibopanna-sachithapadukone-join-ka10012_30112019103052_3011f_1575090052_26.jpg)
ಒಂದು ವಾರದಿಂದ ಟಾಕಿಪೋಷನ್ ಶೂಟಿಂಗ್ನಲ್ಲಿ ಬಿಝಿ ಇದ್ದ ಮಲ್ಲ, ಇಂದಿನಿಂದ ಸಾಂಗ್ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇನ್ನು ರವಿ ಬೋಪ್ಪಣ್ಣ ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಲ್ಟ್ ಬಿಯರ್ಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ರವಿಮಾಮನ ಲುಕ್ ಈಗಾಗಲೇ ರಿವೀಲ್ ಆಗಿದೆ. ಇದೀಗ ಮತ್ತೊಂದು ಲುಕ್ ಕೂಡ ಅಭಿಮಾನಿಗಳಿಗೆ ಪರಿಚಯವಾಗಿದೆ.
![ravi bipanna movie shooting in madikeri](https://etvbharatimages.akamaized.net/etvbharat/prod-images/kn-bng-2-ravibopanna-sachithapadukone-join-ka10012_30112019103052_3011f_1575090052_858.jpg)
ಈ ಲುಕ್ನಲ್ಲಿ 'ಪುಟ್ನಂಜ' ರೀತಿ ರವಿಮಾಮ ಮೀಸೆ ಬಿಟ್ಟು, ಕ್ಲೀನ್ ಶೇವ್ ಮಾಡಿ ಸಖತ್ ಯಂಗ್ ಆಗಿ ಕಾಣಿಸಿದ್ದಾರೆ. ಈ ರಸಿಕನ ಲುಕ್ಕಿಗೆ ಲೇಡಿ ಫ್ಯಾನ್ಸ್ ಹಾರ್ಟ್ ಬೀಟ್ ಹೆಚ್ಚಾಗೋದಂತು ಗ್ಯಾರಂಟಿ.
![ravi bipanna movie shooting in madikeri](https://etvbharatimages.akamaized.net/etvbharat/prod-images/kn-bng-2-ravibopanna-sachithapadukone-join-ka10012_30112019103052_3011f_1575090052_1026.jpg)