ಕೊರೊನಾ ವೈರಸ್ ಚಿತ್ರರಂಗದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಹೀಗಾಗಿ ನಿರ್ಮಾಪಕರ ಪರಿಸ್ಥಿತಿ ಅರಿತ ಕರ್ನಾಟಕ ಕ್ರಶ್ ರಶ್ಮಿಕ ಮಂದಣ್ಣ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ.
ಕನ್ನಡ ಚಿತ್ರದ ಮೂಲಕ ನಟನೆ ಆರಂಭಿಸಿ ತಮಿಳು,ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿರುವ ರಶ್ಮಿಕ ತಮ್ಮ ಮುಂದಿನ ಸಿನಿಮಾಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ರಶ್ಮಿಕ ತಮಿಳಿನ ಸುಲ್ತಾನ್ ಮತ್ತು ತೆಲುಗಿನ ಪುಷ್ಪ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.