ETV Bharat / sitara

ರಶ್ಮಿಕಾಗೆ ಕದಿಯುವ ಚಟ ಕೂಡಾ ಇದ್ಯಂತೆ..ಅವರು ಕದ್ದಿರೋದು ಹೃದಯವಂತೂ ಅಲ್ಲ..! - Geeta govindam fame Rashmika

ನಾನು ಹೋಟೆಲ್ ರೂಮ್​ನಲ್ಲಿ ಉಳಿದಾಗ ಅಲ್ಲಿ ಶ್ಯಾಂಪೂವನ್ನು ಬ್ಯಾಗಿಗೆ ಸೇರಿಸಿಕೊಳ್ಳುವ ಅಭ್ಯಾಸ ಇತ್ತು. ಒಮ್ಮೆ ಪಿಲ್ಲೋ ಕವರ್​​​ವೊಂದನ್ನು ಕೂಡಾ ಮನೆಗೆ ತಂದಿದ್ದೆ ಎಂಬ ವಿಚಾರವನ್ನು ರಶ್ಮಿಕಾ ತಮ್ಮ ಟ್ವಿಟ್ಟರ್​​​ನಲ್ಲಿ ಹೇಳಿಕೊಂಡಿದ್ದಾರೆ.

Rashmika Stole shampoo in hotel
ರಶ್ಮಿಕಾ ಮಂದಣ್ಣ
author img

By

Published : Sep 23, 2020, 8:55 AM IST

ಕೊಡಗು ಚೆಲುವೆ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್​​ನ ಬಹು ಬೇಡಿಕೆಯ ನಟಿ. ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿ ತೆಲುಗಿನ 'ಚಲೋ' ಸಿನಿಮಾ ಮೂಲಕ ಟಾಲಿವುಡ್​ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿ ಈಗ ಅಲ್ಲಿನ ಸ್ಟಾರ್ ಹೀರೋಯಿನ್.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ರಶ್ಮಿಕಾ ಕೆಲವೊಂದು ಆಸಕ್ತಿಕರ ವಿಚಾರವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಗಳು ಲೈವ್ ಮೂಲಕ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ಈ ಸಮಯದಲ್ಲಿ ಅವರು ಹೋಟೆಲ್​​​​​ ರೂಮ್​ನಲ್ಲಿ ಉಳಿದಿರುವಾಗ ನನಗೆ ಅಲ್ಲಿ ಶ್ಯಾಂಪೂಗಳನ್ನು ಬ್ಯಾಗಿಗೆ ಸೇರಿಸಿಕೊಳ್ಳುವ ಅಭ್ಯಾಸ ಇತ್ತು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಒಮ್ಮೆ ಪಿಲ್ಲೋ ಕವರ್ ಇಷ್ಟ ಆಯ್ತು. ಅದನ್ನು ಕೂಡಾ ನನ್ನ ವ್ಯಾನಿಟಿ ಬ್ಯಾಗಿನಲ್ಲಿಟ್ಟು ತಂದಿದ್ದೆ ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ರಿವೀಲ್ ಮಾಡಿರುವ ಈ ವಿಚಾರಕ್ಕೆ ಈ ನೆಟಿಜನ್ಸ್ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ನನಗೆ ಸ್ಟ್ರೆಸ್ ಆದರೆ ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು, ಮನಸೋ ಇಚ್ಛೆ ನೃತ್ಯ ಮಾಡುವುದು, ಟಿವಿ ನೋಡುವುದು, ಲಾಂಗ್ ಡ್ರೈವ್ ಹೋಗುವುದು, ಐಸ್​​​​ ಕ್ರೀಂ ಜೊತೆ ಪಾನಿಪೂರಿ, ದಹಿ ಪೂರಿ ತಿನ್ನುತ್ತೇನೆ ಎಂದು ಕೂಡಾ ಹೇಳಿಕೊಂಡಿದ್ದಾರೆ.

Rashmika Stole shampoo in hotel
ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಕರಿಯರ್ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ತಮಿಳಿನ 'ಸುಲ್ತಾನ್' ಹಾಗೂ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪಾ' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಕನ್ನಡದಲ್ಲಿ ಧ್ರುವಾ ಸರ್ಜಾ ಜೊತೆ ಅಭಿನಯಿಸಿರುವ 'ಪೊಗರು' ಚಿತ್ರ ಬಿಡುಗಡೆಯಾಗಬೇಕಿದೆ. ಸದ್ಯಕ್ಕೆ ರಶ್ಮಿಕಾ ತೆಲುಗು ಚಿತ್ರಗಳಲ್ಲೇ ಹೆಚ್ಚು ಬ್ಯುಸಿಯಾಗಿದ್ದು ಹೈದರಾಬಾದ್​​ನಲ್ಲಿ ಫ್ಲಾಟ್​​​​ ಒಂದನ್ನು ಖರೀದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.