ರಮೇಶ್ ಅರವಿಂದ್ 1980 ದಶಕದಿಂದಲೂ ಇದುವರೆಗೂ ಬೇಡಿಕೆಯಲ್ಲಿರುವ ನಟ. ನಟನೆಯಾಗಲಿ, ಚಿತ್ರ ನಿರ್ದೇಶನದಲ್ಲಾಗಲಿ, ನಿರೂಪಣೆಯಲ್ಲಾಗಲಿ ಅವರದ್ದು ಎತ್ತಿದ ಕೈ.
ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. 'ಬಟರ್ ಫ್ಲೈ', 'ಶಿವಾಜಿ ಸುರತ್ಕಲ್' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ್ಯಕ್ಟಿಂಗ್ ಜೊತೆಗೆ ನಿರ್ದೇಶನ ಕೂಡಾ ಮಾಡುತ್ತಿರುವ ಸಿನಿಮಾ '100'. ಈ ಸಿನಿಮಾ ಶೂಟಿಂಗ್ ಕೂಡಾ ಭರದಿಂದ ಸಾಗಿದೆ. ಬೆಂಗಳೂರಿನ ಮನೆಯೊಂದರಲ್ಲಿ ಈ ಸಿನಿಮಾ ಚಿತ್ರೀಕರಣ ಜರುಗುತ್ತಿದೆ. ಈ ಶೂಟಿಂಗ್ನಲ್ಲಿ ರಚಿತಾ ರಾಮ್ ಹಾಗೂ 'ಜೋಶ್' ಸಿನಿಮಾ ಖ್ಯಾತಿಯ ನಟಿ ಪೂರ್ಣ ಭಾಗವಹಿಸಿದ್ದಾರೆ. ರಚಿತಾ ರಾಮ್ ಹಾಗೂ ಪೂರ್ಣಗೆ ರಮೇಶ್ ಬಬ್ಲಿ ನಿಕ್ ನೇಮ್ ಕೂಡಾ ನೀಡಿದ್ದಾರಂತೆ. ಈ ಹೆಸರಿಗೆ ರಚಿತಾ ರಾಮ್ ಕೂಡಾ ದಿಲ್ಖುಷ್ ಆಗಿದ್ದಾರೆ. ಎಂ. ರಮೇಶ್ ರೆಡ್ಡಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು ತನ್ನ ವಿಶೇಷತೆಗಳಿಂದಲೇ ಸಿನಿಮಾ ಟಾಕ್ ಆಫ್ ದಿ ಟೌನ್ ಎನಿಸಿದೆ.