ಎಷ್ಟೋ ನಟರು ತಾವು ಹತ್ತಿ ಬಂದ ಏಣಿಯನ್ನು ಮರೆಯುತ್ತಾರೆ. ಆದರೆ ಕೆಲವರು ಅದೇ ತಮ್ಮ ವಿಜಯದ ಮೆಟ್ಟಿಲು ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ಇನ್ನು ಕೆಲವರು ತಮ್ಮನ್ನು ಸ್ಟಾರ್ ಪಟ್ಟಕ್ಕೆ ಏರಿಸಿದ ಅಭಿಮಾನಿಗಳನ್ನು ಮಾತ್ರ ಬಹಳ ಗೌರವಿಸುತ್ತಾರೆ.
ಇತ್ತೀಚೆಗೆ ಹೈದರಾಬಾದ್ ಚಿರಂಜೀವಿ ಯುವ ಸಂಘದ ಅಧ್ಯಕ್ಷ ನೂರ್ ಅಹ್ಮದ್ ಎಂಬುವವರು ಅನಾರೋಗ್ಯದಿಂದ ಆಕಸ್ಮಿಕ ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಆತನ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಮಾಧಾನ ಹೇಳಿ ಬಂದಿದ್ದರು. ಚಿರಂಜೀವಿ ಪುತ್ರ ರಾಮ್ಚರಣ್ ಬೇರೆ ಸ್ಥಳದಲ್ಲಿ ಶೂಟಿಂಗ್ನಲ್ಲಿ ಬ್ಯುಸಿ ಇದ್ದು ಹೈದರಾಬಾದ್ ಬರುತ್ತಿದ್ದಂತೆ ನೂರ್ ಅಹ್ಮದ್ ಮನೆಗೆ ತೆರಳಿ ಕುಟುಂಬವನ್ನು ಭೇಟಿ ಮಾಡಿ ಬರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಆತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ನೂರ್ ಅಹ್ಮದ್ ಅವರು ಮೆಗಾ ಫ್ಯಾಮಿಲಿಯ ಬಹಳ ದೊಡ್ಡ ಅಭಿಮಾನಿ. ಚಿರಂಜೀವಿ ಹುಟ್ಟುಹಬ್ಬದಂದು ರಕ್ತದಾನ, ಅನ್ನದಾನದಂತ ಜನರಿಗೆ ಉಪಯೋಗವಾಗುವಂತ ಎಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾದಾಗ ಕೂಡಾ ಅವರನ್ನು ನೋಡಲು ಸ್ವತ: ಚಿರಂಜೀವಿ ಹೋಗಿಬಂದಿದ್ದರು. ಆದರೆ ಇದೀಗ ಅವರ ನಿಧನದ ವಾರ್ತೆ ತಿಳಿದು ಬಹಳ ಬೇಸರಗೊಂಡಿದ್ದಾರೆ.