ETV Bharat / sitara

ಕಬ್ಜ ಚಿತ್ರದ ಪೋಸ್ಟರ್​​ ರಿಲೀಸ್​... ಬುದ್ಧಿವಂತನಿಗೆ ರಾಮ್​ಗೋಪಾಲ್​​ ವರ್ಮಾ ಕೊಟ್ರು ಗಿಫ್ಟ್ - ರಾಮ್​ ಗೋಪಾಲ್​ ವರ್ಮಾ

ಬುದ್ಧಿವಂತ ನಟನ ಕಬ್ಜ ಚಿತ್ರದ ಥೀಮ್ ಫೋಸ್ಟರ್ ಅನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಿಲೀಸ್ ಮಾಡಿ, ರಿಯಲ್ ಸ್ಟಾರ್​ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ.

Ram Gopal Verma who released the poster for the Kabza film
ಕಬ್ಜ ಚಿತ್ರದ ಪೋಸ್ಟರ್​​ ರಿಲೀಸ್​ ಮಾಡಿದ ರಾಮ್​ಗೋಪಾಲ್​​ ವರ್ಮಾ
author img

By

Published : Sep 17, 2020, 7:04 PM IST

ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಟೈಮ್ ಏಳುಭಾಷೆಗಳಲ್ಲಿ ತಯಾರಾಗ್ತಾ ಇರೋ ಚಿತ್ರ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಆರ್ ಚಂದ್ರು ಕಾಂಬಿನೇಷನ್​​ನಲ್ಲಿ ಬರ್ತಾ ಇರೋ ಕಬ್ಜ ಚಿತ್ರ, ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಬುದ್ಧಿವಂತ ನಟ ಅಂತಾ ಕರೆಯಿಸಿಕೊಂಡಿರುವ ಉಪೇಂದ್ರಗೆ, ಕಾಂಟ್ರವರ್ಸಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿ ಉಡುಗೊರೆ ನೀಡಿದ್ದಾರೆ.

ಕಬ್ಜ ಚಿತ್ರದ ಪೋಸ್ಟರ್​​ ರಿಲೀಸ್​ ಮಾಡಿದ ರಾಮ್​ಗೋಪಾಲ್​​ ವರ್ಮಾ

ಅಷ್ಟೇ ಅಲ್ಲಾ ಈ‌ ಸಿನಿಮಾ‌ದ ಮೇಕಿಂಗ್​ಅನ್ನು ನೋಡಿದ ಆರ್​ಜಿವಿ, ಪ್ರಾಮಿಸ್ಸಿಂಗ್ ಆಗಿದೆ ಅಂತ ಭವಿಷ್ಯ ನುಡಿದಿದ್ದಾರೆ. ನಾಳೆ ಉಪೇಂದ್ರ ಅವರ 51ನೇ ಹುಟ್ಟು ಹಬ್ಬ. ಒಂದು ದಿನ‌ ಮುಂಚಿತವಾಗಿ ನಿರ್ದೇಶಕ ಆರ್.ಚಂದ್ರು ಬುದ್ಧಿವಂತ ನಟನಿಗೆ ಸ್ಪೆಷಲ್ ಉಡುಗೊರೆ ಕೊಟ್ಟಿದ್ದಾರೆ‌.

ಚಿತ್ರದಲ್ಲಿ 60ರ ದಶಕದ ಡಾನ್ ಆಗಿ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಲುಕ್​​ನಿಂದ ಕೂಡಿರುತ್ತೆ. ಸದ್ಯ ರಿವೀಲ್ ಆಗಿರುವ ಥೀಮ್ ಪೋಸ್ಟರ್​ನಲ್ಲಿ ಗನ್, ರಿವಾಲ್ವರ್​​ನಿಂದ ಡಿಸೈನ್ ಆಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಹೆಣದ ರಾಶಿಯಿಂದ ಕೂಡಿದೆ.

ಈ ಹಿಂದೆ ಐ ಲವ್ ಯು ಚಿತ್ರವನ್ನ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಿದ್ದ ಆರ್ ಚಂದ್ರು, ಕಬ್ಜ ಚಿತ್ರವನ್ನ, ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಹೀಗೆ ಏಳು ಭಾಷೆಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.