ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಮೆಗಾ ಸಿನಿಮಾ 'ಸೈರಾ ನರಸಿಂಹರೆಡ್ಡಿ' ನಿರೀಕ್ಷಿಸಿದಂತೆಯೇ ಬಾಕ್ಸ್ ಆಫೀಸ್ನಲ್ಲೂ ಮೆಗಾ ಕಲೆಕ್ಷನ್ ಮಾಡಿಕೊಳ್ತಿದೆ. ಕೇವಲ ಎರಡೇ ದಿನಗಳಲ್ಲಿ ನೂರು ಕೋಟಿ ಕ್ಲಬ್‍ಗೆ ಎಂಟ್ರಿ ಕೊಟ್ಟಿರುವ ಸೈರಾ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲೂ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದರಿಂದ ನಿರ್ಮಾಪಕ ರಾಮ್ ಚರಣ್ ಈಗಾಗಲೇ ಭರ್ಜರಿ ಪಾರ್ಟಿ ನೀಡಿದ್ದಾರೆ. ಇದರ ಮಧ್ಯೆ ರಾಮ್ ಚರಣ್ ಪತ್ನಿ ಉಪಾಸನಾ ಇದೀಗ ತಮನ್ನಾ ಅಭಿನಯಕ್ಕೆ ಫುಲ್ ಪಿಧಾ ಆಗಿದ್ದು, ಅವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
![Tamannaah Bhatia](https://etvbharatimages.akamaized.net/etvbharat/prod-images/ef-fo8ouwaa9-xk_0910newsroom_1570634748_921.jpg)
ಜಗತ್ತಿನಲ್ಲಿ ಅತಿ ಅಮೂಲ್ಯವಾದ ವಜ್ರದ ಉಂಗುರವನ್ನ ನಟಿ ತಮನ್ನಾಗೆ ಉಪಾಸನಾ ಉಡುಗೊರೆಯಾಗಿ ನೀಡಿದ್ದು, ಈ ವಜ್ರ ಜಗತ್ತಿನ 5ನೇ ಅತಿದೊಡ್ಡ ಡೈಮಂಡ್ ರಿಂಗ್ ಎಂದು ತಿಳಿದು ಬಂದಿದೆ. ಇದರ ಮೂಲ ಬೆಲೆ ಬರೋಬ್ಬರಿ 2 ಕೋಟಿ ಎಂದು ಹೇಳಲಾಗುತ್ತಿದೆ. ಈ ಹಿಂದಿನಿಂದಲೂ ಉಪಾಸನಾ ಹಾಗೂ ತಮನ್ನಾ ಒಳ್ಳೆಯ ಫ್ರೆಂಡ್ಸ್ ಆಗಿದ್ದಾರೆ. ಈಗಾಗಲೇ ಈ ವಜ್ರದುಂಗುರ ಕೈಯಲ್ಲಿ ಹಾಕಿಕೊಂಡು ತಮನ್ನಾ ಟ್ವಿಟರ್ನಲ್ಲಿ ಕೆಲವೊಂದು ಫೋಟೋ ಶೇರ್ ಮಾಡಿದ್ದಾರೆ.
ಅಕ್ಟೋಬರ್ 2ರಂದು ತೆರೆಗೆ ಅಪ್ಪಳಿಸಿರುವ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ತಮನ್ನಾ ಲಕ್ಷ್ಮಿ ಎಂಬ ನೃತ್ಯಗಾರ್ತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.