ಸ್ಯಾಂಡಲ್ ವುಡ್ನಲ್ಲಿ ಪೋಸ್ಟರ್ ಹಾಗು ಟೀಸರ್ ನಿಂದಲೇ ಸದ್ದು ಮಾಡ್ತಿದೆ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ(Ek LOve Ya) ಚಿತ್ರ. ಚಿತ್ರ, ಟಾಕಿಪೋಷನ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರು ಏಕ್ ಲವ್ ಯಾ ಚಿತ್ರದ ಮೂರನೇ ಹಾಡನ್ನ ಶುಕ್ರವಾರ ಬಿಡುಗಡೆ ಮಾಡಲಾಯಿತು.
ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಚಿತ್ರದ ಮೂಲಕ, ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೊಂದು ಲವ್ ಬ್ರೇಕಪ್ ಸಾಂಗ್, ಆಗಿದ್ದು, ತೆಲುಗಿನ ಸೆನ್ಸೇಷನಲ್ ಗಾಯಕಿ ಮಂಗ್ಲಿ ಈ ಹಾಡನ್ನ ಹಾಡುವ ಮೂಲಕ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಎಣ್ಣೆಗೂ ಹೆಣ್ಣಿಗೂ ಎಲ್ಲಿದೆ ಲಿಂಕು ಹೇಳೋ ಭಗವಂತಾ ಹಾಡನ್ನ ಖಾಸಗಿ ಹೊಟೇಲ್ನಲ್ಲಿ ಬಿಡುಗಡೆ ಮಾಡಲಾಯಿತು. ಅದಕ್ಕೂ ಮುನ್ನ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ ಪ್ರೇಮ್, ಯುವ ನಟ ರಾಣಾ, ನಟಿಯರಾದ ರಚಿತಾ ರಾಮ್, ರಿಷ್ಮಾ ನಾಣಯ್ಯ, ಮೇಘನಾ ಗಾವ್ಕಂರ್ ಎಲ್ಲರೂ ದಿವಂಗತ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು.
ಹಾಡಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರೇ ಸಾಹಿತ್ಯ ರಚಿಸಿದ್ದು, ತೆಲುಗು ಗಾಯಕಿ ಮಂಗ್ಲಿ ಹಾಗೂ ಕೈಲಾಶ್ ಕೇರ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.
ಬಳಿಕ ನಟಿ ಹಾಗು ನಿರ್ಮಾಪಕಿ ರಕ್ಷಿತಾ ಪ್ರೇಮ್ ತಮ್ಮ ಏಕ್ ಲವ್ ಯಾ ಸಿನಿಮಾ ಚಿತ್ರತಂಡದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ ತಮ್ಮ ಮೊದಲ ಸಿನಿಮಾವನ್ನ ನೆನದು ಅಂದ್ರೆ, ಪುನೀತ್ ರಾಜ್‍ಕುಮಾರ್ ನೆನಸಿಕೊಂಡು ಕಣ್ಣೀರು ಹಾಕಿದರು. ಅಷ್ಟೇ ಅಲ್ಲಾ ಪುನೀತ್ ರಾಜ್‍ಕುಮಾರ್ ಬಗ್ಗೆ ತೆಲುಗಿನ ಖ್ಯಾತ ಹಿನ್ನಲೆ ಗಾಯಕಿ ಮಂಗ್ಲಿ ಕೂಡ, ನೆನದು ಭಾವುಕರಾದರು.
ಪುನೀತ್ ರಾಜ್ ಕುಮಾರ್ ಈ ಸಾವಿನ ಸುದ್ದಿ ಕೇಳುವ ಸಂದರ್ಭದಲ್ಲಿ, ಗಾಯಕಿ ಮಂಗ್ಲಿ ಸಂಗೀತ ನಿರ್ದೇಶಕ ಆರ್ಪಿ ಪಟ್ನಾಯಾಕ್, ಜೊತೆಗೆ ಸಾಂಗ್ ವೊಂದನ್ನ ರೆಕಾರ್ಡಿಂಗ್ ಮಾಡ್ತಾ ಇದ್ರಂತೆ. ಆಗ ಆರ್ಪಿ ಪಟ್ನಾಯಾಕ್ ಅವ್ರಿಗೆ ಯಾರೋ ಕರೆ ಮಾಡಿ ಅಪ್ಪು ಅವರಿಗೆ ಹೃದಯಾಘಾತ ಆಗಿದೆ ಎಂದು ತಿಳಿಸಿದ್ದರಂತೆ. ವಿಷಯ ತಿಳಿದ ಪಟ್ನಾಯಾಕ್ ತುಂಬಾ ಬೇಸರಗೊಂಡಿದ್ದರು. ತಕ್ಷಣ ಮಂಗ್ಲಿ ಅವರಿಗೆ ಅಪ್ಪು ಅಂದರೆ ಪುನೀತ್ ರಾಜ್‍ಕುಮಾರ್ ಅನ್ನೋದು ಗೊತ್ತಾಗಲಿಲ್ವಂತೆ. ಸ್ವಲ್ಪ ಸಮಯದ ನಂತರ ನಿಧನರಾಗಿರುವುದು ಅದು ಪುನೀತ್ ರಾಜ್‍ಕುಮಾರ್ ಅಂದಾಕ್ಷಣ ತಮಗಿ ಆಘಾತ ಉಂಟಾಯಿತು. ಸದಾ ನಗುನಗುತ್ತಾ ಇರುವ ಅಂತಹ ಸ್ಟಾರ್ಅನ್ನ ನಾನು ಎಲ್ಲು ನೋಡಿಲ್ಲ ಎಂದು ಗಾಯಕಿ ಮಂಗ್ಲಿ ಕೂಡ ಭಾವುಕರಾದರು.
ಇದನ್ನು ಓದಿ:ಲವ್ಲಿ ಸ್ಟಾರ್ ಪ್ರೇಮ್ ‘ಪ್ರೇಮಂ ಪೂಜ್ಯಂ’ಗೆ ಮನಸೋತ ಸ್ಯಾಂಡಲ್ವುಡ್ ಮಂದಿ