ETV Bharat / sitara

ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಟಾರ್ಚರ್ ಹಾಡು ರಿಲೀಸ್: ಸಿನಿಮಾ ಬಿಡುಗಡೆ ದಿನವೂ​ ಫಿಕ್ಸ್​ - 777 ಚಾರ್ಲಿ ಸಿನಿಮಾ

ಗೌರಿ ಗಣೇಶ ಹಬ್ಬದ ಪ್ರಯುಕ್ತ 777 ಚಾರ್ಲಿ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಇದು ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ಶ್ವಾನದ ನಡುವಿನ ಹಾಡು.

rakshith-shetty
ರಕ್ಷಿತ್​ ಶೆಟ್ಟಿ
author img

By

Published : Sep 9, 2021, 5:39 PM IST

ಟೀಸರ್ ಹಾಗು ಚಿತ್ರದ ವಿಶೇಷವಾದ ಶೀರ್ಷಿಕೆಯಿಂದ '777 ಚಾರ್ಲಿ' ಸಿನಿಮಾ ಸದ್ದು ಮಾಡುತ್ತಿದೆ. ಅವನೇ ಶ್ರೀಮನ್ನಾರಾಯಣ ನಂತರ ನಟ ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಇದಾಗಿದೆ.

ಗೌರಿಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಮೊದಲ ಹಾಡು​ ಬಿಡುಗಡೆ ಆಗಿದೆ. ನಾಯಕ ನಟ ಮತ್ತು ಚಾರ್ಲಿ ಎಂಬ ಶ್ವಾನದ ನಡುವಿನ ಹಾಡು ಇದಾಗಿದೆ. ಟಾರ್ಚರ್​ ಸಾಂಗ್ ಎಂದೇ ಹೇಳಲಾಗುತ್ತಿದ್ದು ಶ್ವಾನವನ್ನು ಇಷ್ಟ ಪಡುವ ಜನರಿಗೆ ಈ ಹಾಡು ಇಷ್ಟವಾಗಬಲ್ಲದು.

ಈ ಹಾಡಿನಲ್ಲಿ ಧರ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಹಾಗೂ ಶ್ವಾನ ಚಾರ್ಲಿ ನಡುವಿನ ಜಗಳವೇ ಹೈಲೆಟ್ ಆಗಿದೆ. ಶ್ವಾನ ಚಾರ್ಲಿ ಕೊಡುವ ಕಾಟಕ್ಕೆ ರಕ್ಷಿತ್ ಶೆಟ್ಟಿ ಸುಸ್ತಾಗಿ ಹೋಗುತ್ತಾರೆ. ಈ ಚಿತ್ರಕ್ಕೆ ಕಿರಣ್​ರಾಜ್​ ನಿರ್ದೇಶನವಿದೆ. ನೋಬಿನ್​ ಪೌಲ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲೂ 777 ಚಾರ್ಲಿ ಹಾಡು ಬಿಡುಗಡೆ ಆಗಿದೆ. ಕನ್ನಡ ಅವತರಣಿಕೆಗೆ ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ. ನಾಗಾರ್ಜುನ್​ ಶರ್ಮಾ ಸಾಹಿತ್ಯವಿದೆ.

ಸಿನಿಮಾ ರಿಲೀಸ್​ ಡೇಟ್​:

ರಕ್ಷಿತ್ ಶೆಟ್ಟಿ ಅವರಿಗೆ ಲಕ್ಕಿ ತಿಂಗಳಾಗಿರುವ ಡಿಸೆಂಬರ್​ 31ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಕಿರಿಕ್ ಪಾರ್ಟಿ ಹಾಗು ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ಡಿಸೆಂಬರ್ ತಿಂಗಳಲ್ಲಿಯೇ ಬಿಡುಗಡೆ ಆಗಿ ಯಶಸ್ಸು ಕಂಡಿದ್ದವು. ಈ ಸೆಂಟಿಮೆಂಟ್​ನಿಂದಲೇ ಮುಂದಿನ ಈ ಸಿನಿಮಾವನ್ನು ಡಿಸೆಂಬರ್ 31ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

ರಕ್ಷಿತ್ ಶೆಟ್ಟಿಗೆ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇಠ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.