ETV Bharat / sitara

RICHARD ANTHONY: ಹೊಂಬಾಳೆ ಫಿಲಂಸ್ ಹೊಸ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಆ್ಯಕ್ಷನ್​ ಕಟ್​​ - RRR MOVIE

ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ 'ರಿಚರ್ಡ್ ಆಂಟನಿ' ಎಂಬ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡ್ತಿದ್ದು, ಮತ್ತೆ ನಿರ್ದೇಶಕನಾಗಿ ಮಿಂಚುವ ತಯಾರಿಯಲ್ಲಿದ್ದಾರೆ.

Rakshit Shetty to direct Richard Antony for Hombale Films
ರಕ್ಷಿತ್ ಶೆಟ್ಟಿ
author img

By

Published : Jul 11, 2021, 1:41 PM IST

Updated : Jul 11, 2021, 3:30 PM IST

ಉಳಿದವರು ಕಂಡಂತೆ ಚಿತ್ರದ ನಂತರ ನಿರ್ದೇಶನದಿಂದ ದೂರವೇ ಉಳಿದಿದ್ದ ರಕ್ಷಿತ್ ಶೆಟ್ಟಿ, ಇದೀಗ ಮತ್ತೆ ಆ್ಯಕ್ಷನ್​ ಕಟ್​​ ಹೇಳಲು ಮುಂದಾಗಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ 'ರಿಚರ್ಡ್ ಆಂಟನಿ' ಎಂಬ ಚಿತ್ರಕ್ಕೆ ಅವರೇ ಕಥೆ ಬರೆದು, ನಿರ್ದೇಶಿಸುತ್ತಿರುವ ಜತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಹೊಂಬಾಳೆ ಫಿಲಂಸ್ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಭಾನುವಾರ ಘೋಷಿಸಿದೆ.

rakshith shetty new movie
ಹೊಂಬಾಳೆ ಫಿಲಂಸ್ ಹೊಸ ಚಿತ್ರ

ಗುರುವಾರವಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯು ಹೊಸ ಚಿತ್ರದ ಪೋಸ್ಟರ್​ವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು. ಈ ಚಿತ್ರದ ಹೆಸರೇನು, ಯಾರು ನಟಿಸುತ್ತಾರೆ ಎಂಬ ವಿಷಯ, ಇಂದು ಹೊಂಬಾಳೆ ಫಿಲಂಸ್​ನ ಯೂಟ್ಯೂಬ್ ಚಾನಲ್​​ನಲ್ಲಿ ಇಂದು ಪ್ರೊಡಕ್ಷನ್ ನಂಬರ್ 10 ಕುರಿತಾದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.

  • " class="align-text-top noRightClick twitterSection" data="">

ಮೊದಲು ಬಿಡುಗಡೆಯಾಗಿದ್ದ ಪೋಸ್ಟರ್ ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿತ್ತು. ಸಮುದ್ರದಿಂದ ನಡೆದು ಬಂದಂತಿರುವ ರಕ್ತಸಿಕ್ತ ಹೆಜ್ಜೆಗುರುತಿದ್ದ ಈ ಪೋಸ್ಟರ್​ನಲ್ಲಿ ಅಲೆಗಳು ಸತ್ತವರನ್ನು ಎಳೆದು ತಂದರೆ, ಸಮುದ್ರ ತೀರವೆಲ್ಲ ರಕ್ತವಾಗುತ್ತದೆ ಎಂಬ ಅರ್ಥ ಬರುವ ಟ್ಯಾಗ್​ಲೈನ್​ ಇದೆ. ಪೋಸ್ಟರ್ ನೋಡಿದವರೆಲ್ಲರೂ, ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಬಹುದಾ? ಸೂರರೈ ಪೋಟ್ರು ನಿರ್ದೇಶಿಸಿದ್ದ ಸುಧಾ ಕೊಂಗರಾ ನಿರ್ದೇಶಿಸಬಹುದಾ ಎಂದು ಪ್ರಶ್ನಿಸಿದ್ದರು. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡದೆ ಸುಮ್ಮನಿದ್ದ ಹೊಂಬಾಳೆ ಫಿಲಂಸ್, ಇದೀಗ ಈ ಪೋಸ್ಟರ್ ಮೂಲಕವೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ.

Last Updated : Jul 11, 2021, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.