ETV Bharat / sitara

'ಅಪ್ಪು ಸಾರ್ ನಮ್ಮ ಪಾಲಿನ ದೇವರು' - ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿ ಕೆಲಸಗಾರ ಲಕ್ಷ್ಮಣ್​

ಪ್ರತಿದಿನ ಡಾ. ರಾಜ್​ಕುಮಾರ್ ಹಾಗು ಪಾರ್ವತಮ್ಮ ರಾಜ್​ಕುಮಾರ್ ಸಮಾಧಿಯ ಬಳಿ ಬರುತ್ತಿದ್ದ ಪುನೀತ್ ರಾಜ್​ಕುಮಾರ್​​ಗೆ ಇಲ್ಲಿನ ಪಾರ್ಕ್ ಪರಿಸರ ತುಂಬಾನೇ ಇಷ್ಟವಂತೆ. ಮಳೆ ಇರಲಿ, ಚಳಿ ಇರಲಿ, ಇಲ್ಲಿಗೆ ಬರೋದನ್ನ ಅವರು ನಿಲ್ಲಿಸಿರಲಿಲ್ವಂತೆ.

lakshman
ಲಕ್ಷ್ಮಣ್
author img

By

Published : Nov 2, 2021, 10:11 PM IST

ನಟ ಪುನೀತ್ ರಾಜ್​ಕುಮಾರ್ 70-80ನೇ ವಯಸ್ಸಿನಲ್ಲಿ ಮಾಡಬೇಕಾದ ಸಾಧನೆ, ಸಾಮಾಜಿಕ ಕೆಲಸಗಳನ್ನ ಕೇವಲ 46ನೇ ವಯಸ್ಸಿನಲ್ಲಿ ಮುಗಿಸಿ ನಮ್ಮನ್ನು ಅಗಲಿದ್ದಾರೆ. ಸದಾ ರಾಜಕುಮಾರನಂತೆ ನಗುತ್ತಾ, ಸರಳತೆಯಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ರಾಜ್​ಕುಮಾರ್ ಸಮಾಧಿಯ ಬಳಿ ಕೆಲಸ ಮಾಡುವ ಲಕ್ಷ್ಮಣ್ ಮಾತನಾಡಿದರು

ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್​ಕುಮಾರ್ ಹಾಗು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಯ ಹತ್ತಿರ ಕೆಲಸಗಳನ್ನ ಮಾಡ್ತಾ ಇರೋ ಲಕ್ಷ್ಮಣ್ ಹಾಗು ಲಲಿತಮ್ಮ ನಟ ಪುನೀತ್​ ಅವರ ಬಗ್ಗೆ ಹೇಳಿಕೊಂಡಿದ್ದಾರೆ.

16 ವರ್ಷದಿಂದ ಇಲ್ಲಿನ ಸಮಾಧಿಯ ಸುತ್ತಾ ಕಸ ಗುಡಿಸಿ, ದೀಪ ಹಚ್ಚುತ್ತಾ ಬಂದಿರುವ ಲಕ್ಷ್ಮಣ್, ತಮ್ಮನ್ನು ಇಲ್ಲಿಯವರೆಗೆ ಸಾಕಿದ್ದು ಅಪ್ಪು ಸಾರ್ ಎಂದಿದ್ದಾರೆ. ಅಲ್ಲದೇ, ಅಪ್ಪು ಸಾರ್ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ನನ್ನನ್ನ ಅಪ್ಪಾಜಿ ಅಂತಾ ಕರೆಯುತ್ತಿದ್ದರು. ನನ್ನ ಕಂಡರೆ ಅವರಿಗೆ ತುಂಬಾ ಇಷ್ಟ. ಆರೋಗ್ಯ ಹುಷಾರ್ ಅಂತಾ ಹೇಳ್ತಾ ಇದ್ರು. ನನ್ನ ಮುಖ ನೋಡುತ್ತಾ ಇದ್ದಂತೆ, ಕಷ್ಟ ಏನು ಎಂಬುದನ್ನು ಅರಿತುಕೊಂಡು ಸಹಾಯ ಮಾಡ್ತಾ ಇದ್ರು. ಇದೀಗ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು ಎಂದಿದ್ದಾರೆ.

ಪ್ರತಿದಿನ ಡಾ. ರಾಜ್​ಕುಮಾರ್ ಹಾಗು ಪಾರ್ವತಮ್ಮ ರಾಜ್​ಕುಮಾರ್ ಸಮಾಧಿಯ ಬಳಿ ಬರುತ್ತಿದ್ದ ಪುನೀತ್ ರಾಜ್​ಕುಮಾರ್​​ಗೆ ಇಲ್ಲಿನ ಪಾರ್ಕ್ ಪರಿಸರ ತುಂಬಾನೇ ಇಷ್ಟವಂತೆ. ಮಳೆ ಇರಲಿ, ಚಳಿ ಇರಲಿ, ಇಲ್ಲಿಗೆ ಬರೋದನ್ನ ಪುನೀತ್ ನಿಲ್ಲಿಸಿರಲಿಲ್ವಂತೆ. ತಂದೆ ಹಾಗು ತಾಯಿ ಸಮಾಧಿ ಹತ್ತಿರ ತುಂಬಾ ಹೊತ್ತು ಕಳೆಯುತ್ತಿದ್ದ ಅಪ್ಪು ಇಲ್ಲಿ ಬೆಳೆಯುವ ಕಬ್ಬು ಹಾಗು ಪರಂಗಿ ಹಣ್ಣು ಅಂದ್ರೆ ತುಂಬಾ ಇಷ್ಟಪಡುತ್ತಿದ್ದರಂತೆ.

ಲಕ್ಷ್ಮಣ್​ಗೆ ಚಳಿಗಾಲದಲ್ಲಿ ಸ್ವೆಟರ್​ ಕೊಟ್ಟು, ಆರೋಗ್ಯ ನೋಡಿಕೊಳ್ಳಿ ಎನ್ನುತ್ತಿದ್ದರು. ಹಾಗೆಯೇ, ಅಪ್ಪ ಅಮ್ಮನ ಸಮಾಧಿ ನೋಡಿಕೊಳ್ಳಿ. ಜೊತೆಗೆ ಇಲ್ಲಿಗೆ ಬರುವ ಅಭಿಮಾನಿಗಳನ್ನ ಚೆನ್ನಾಗಿ ನೋಡಿಕೊಳ್ಳಿ ಅಂತಾ ಹೇಳುತ್ತಿದ್ದರು. ಈಗ ನನ್ನ ದೇವರನ್ನ ನೋಡಿಕೊಳ್ಳುವ ಭಾಗ್ಯ ಸಿಕ್ಕಿದೆ ಅಂತಾ ಅವರು ಭಾವುಕರಾದರು.

ಇಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಎಂಬುವವರನ್ನು ಕೂಡಾ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ಲಲಿತಮ್ಮ ಹೇಳುವ ಹಾಗೆ, ನಾನು 16 ವರ್ಷದಿಂದ ಡಾ. ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಯ ಕೆಲಸಗಳನ್ನ ಮಾಡ್ತಾ ಇದ್ದೀನಿ. ನಮ್ಮ ಬಾಳಿಗೆ ದೀಪವಾಗಿದ್ದ ಅಪ್ಪು ಸಾರ್ ಅವರನ್ನು ಕಳೆದುಕೊಂಡಿರೋ ನನಗೆ ಅರಗಿಸಿಕೊಳ್ಳೋದಿಕ್ಕೆ ಆಗುತ್ತಿಲ್ಲ. ಅಪ್ಪು ಸಾರ್ ಸಾವಿನ ಸುದ್ದಿ ಕೇಳಿ ನಾನು ಮೂರ್ಛೆ ಹೋದೆ ಅಂತಾರೆ.

ಪವರ್ ಸ್ಟಾರ್ 1800 ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಅವರಲ್ಲಿ ಲಲಿತಮ್ಮ ಅವರ ಮಗನೂ ಕೂಡ ಒಬ್ಬ. ಲಲಿತಮ್ಮ ಹೇಳುವ ಹಾಗೆ, ನನ್ನ ಮಗನ ವಿದ್ಯಾಭ್ಯಾಸವನ್ನ ಪುನೀತ್ ರಾಜ್​ಕುಮಾರ್ ಸಾರ್ ನೋಡಿ ಕೋಳ್ತಾ ಇದ್ದರು. ನನಗೆ ಮದುವೆ ಆಗಿ 10 ವರ್ಷ ಆದ ಮೇಲೆ ಮಗ ಹುಟ್ಟಿದ. ಅವನ ವಿದ್ಯಾಭ್ಯಾಸದ ಖರ್ಚುನ್ನ ನೋಡಿಕೊಳ್ಳುತ್ತಾ ಇದ್ದರು. ಆಮೇಲೆ ಅವರು ಮಾಡಿದ್ದ ಒಳ್ಳೆ ಕೆಲಸವನ್ನ ಯಾರ ಹತ್ತಿರವೂ ಹೇಳಬಾರದು ಅಂತಾ ಹೇಳ್ತಾ ಇದ್ರು ಎಂದರು.

ಇದನ್ನೂ ಓದಿ: ಪುನೀತ್‌ ನಿವಾಸಕ್ಕೆ ಟಾಲಿವುಟ್‌ ನಟ ನಾಗಾರ್ಜುನ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.