'ದರ್ಬಾರ್', ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಮುಂದಿನ ಸಿನಿಮಾ. ಆ್ಯಕ್ಷನ್ ಹಾಗೂ ಮನರಂಜನೆ ಕಾಂಬಿನೇಷನ್ ಇರುವ ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
- " class="align-text-top noRightClick twitterSection" data="">
ಕೆಲವು ದಿನಗಳ ಹಿಂದೆ ಚಿತ್ರತಂಡ ರಜನೀಕಾಂತ್ ಫಸ್ಟ್ಲುಕ್ ಬಿಡುಗಡೆ ಮಾಡಿತ್ತು. ಇದೀಗ ಹೊಸ ಮೋಷನ್ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ತೆಲುಗು ಭಾಷೆಯ ಮೋಷನ್ ಪೋಸ್ಟರನ್ನು ಸೂಪರ್ ಸ್ಟಾರ್ ಮಹೇಶ್‌ಬಾಬು ಬಿಡುಗಡೆ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಮಹೇಶ್ ಬಾಬು ಶೇರ್ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ರಜನೀಕಾಂತ್, ಆದಿತ್ಯ ಅರುಣಾಚಲಂ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜೋಡಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಇವರೊಂದಿಗೆ ನಿವೇದಾ ಥಾಮಸ್, ಸುನಿಲ್ ಶೆಟ್ಟಿ, ಯೋಗಿ ಬಾಬು, ಸಿಮ್ರಾನ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಸಿನಿಮಾವನ್ನು ಶುಭಾಷ್ ಕರಣ್ ನಿರ್ಮಿಸುತ್ತಿದ್ದಾರೆ.