ಇಂದು ರಜನಿಕಾಂತ್ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ತಲೈವಾಗೆ ವಿಶ್ ಮಾಡುತ್ತಿದ್ದಾರೆ. ಇನ್ನು ರಜಿನಿ ಅಭಿಮಾನಿಗಳಿಗಂತೂ ಈ ದಿನ ಹಬ್ಬವೇ ಸರಿ. ತಮ್ಮ ನೆಚ್ಚಿನ ನಟನನ್ನು ನೋಡಿ ವಿಶ್ ಮಾಡಬೇಕು ಎಂದು ದೂರದೂರಿನಿಂದ ಬಂದಿರುತ್ತಾರೆ. ಆದ್ರೆ ರಜಿನಿಯನ್ನು ನೋಡದೆ ಕೆಲವು ಫ್ಯಾನ್ಸ್ ಕಣ್ಣೀರು ಹಾಕುತ್ತ ವಾಪಸ್ ಹೋಗಿದ್ದಾರೆ.
ಇದನ್ನೂ ಓದಿ : ’’ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್
ಹೌದು ಇಂದು ಅಂತಹದ್ದೇ ಒಂದು ಪ್ರಸಂಗ ನಡೆದಿದೆ. ರಜಿನಿಕಾಂತ್ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನನ್ನು ನೋಡುಲು ರಜಿನಿಕಾಂತ್ ನಿವಾಸದ ಬಳಿ ಹೋಗಿದ್ದಾರೆ. ಆದ್ರೆ ಅಲ್ಲಿನ ಸಿಬ್ಬಂದಿ ರಜಿನಿಕಾಂತ್ ಅವರನ್ನು ಇಂದು ಭೇಟಿಯಾಗಲು ಸಾಧ್ಯವಿಲ್ಲ ಎಂದಾಗ ಆ ಮಹಿಳಾ ಅಭಿಮಾನಿ ಕಣ್ಣೀರು ಹಾಕಿದ್ದಾರೆ. 'ಸರ್ ನಿಮ್ಮನ್ನ ನೋಡಲು ತುಂಬಾ ದೂರದಿಂದ ಬಂದಿದ್ದೇನೆ. ದಯಮಾಡಿ ಹೊರಗಡೆ ಬನ್ನಿ. ಇವರು ನಮ್ಮನ್ನು ಒಳಗಡೆ ಬಿಡುತ್ತಿಲ್ಲ' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ರಜಿನಿಕಾಂತ್ ತಮ್ಮ ಹುಟ್ಟುಹಬ್ಬದ ದಿನದಂದು ಚೆನ್ನೈ ನಿವಾಸದ ಮುಂಭಾಗ ಬಂದು ನೆರೆದಿದ್ದ ಅಭಿಮಾನಿಗಳ ಜೊತೆ ಮಾತನಾಡಿ, ಕೈ ಕುಲುಕುತ್ತಿದ್ದರು. ಆದ್ರೆ ಈ ಬಾರಿ ಕಾರಣಾಂತರಗಳಿಂದ ಅಭಿಮಾನಿಗಳನ್ನು ಭೇಟಿಯಾಗಲು ಆಗಿಲ್ಲ.
-
சென்னை போயஸ்கார்டன் ரஜினி வீடு முன்பு பெங்களூர் ரசிகை..@rmmoffice @rajinikanth @RIAZtheboss pic.twitter.com/5YL73pBDa5
— meenakshisundaram (@meenakshinews) December 12, 2020 " class="align-text-top noRightClick twitterSection" data="
">சென்னை போயஸ்கார்டன் ரஜினி வீடு முன்பு பெங்களூர் ரசிகை..@rmmoffice @rajinikanth @RIAZtheboss pic.twitter.com/5YL73pBDa5
— meenakshisundaram (@meenakshinews) December 12, 2020சென்னை போயஸ்கார்டன் ரஜினி வீடு முன்பு பெங்களூர் ரசிகை..@rmmoffice @rajinikanth @RIAZtheboss pic.twitter.com/5YL73pBDa5
— meenakshisundaram (@meenakshinews) December 12, 2020