ETV Bharat / sitara

ನಿರ್ದೇಶಕರ ಬಗ್ಗೆ ಡಾ.ರಾಜ್​ಕುಮಾರ್ ಹೆಚ್ಚು ಅಭಿಮಾನ ಹೊಂದಿದ್ದರು: ರಾಜೇಂದ್ರ ಸಿಂಗ್ ಬಾಬು - Rajendra Singh Babu

ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಭಗವಾನ್, ಗಿರೀಶ್ ಕಾಸರವಳ್ಳಿ ಹಾಗು ರಾಜೇಂದ್ರ ಸಿಂಗ್ ಬಾಬು 1984ರಲ್ಲಿ ‌ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘವನ್ನು ಕಟ್ಟಿ ಬೆಳೆಸಿದರು. ಆದರೆ ಇಂದು ಡೈರೆಕ್ಟರ್ ಅಸೋಸಿಯೇಷನ್ ಬೀದಿಗೆ ಬಂದಿದೆ ಎಂದು ರಾಜೇಂದ್ರ ಸಿಂಗ್​ ಅಸಮಾಧಾನ ವ್ಯಕ್ತಪಡಿಸಿದರು.

Rajendra Singh Babu
ಡೈರೆಕ್ಟರ್ ಅಸೋಸಿಯೇಷನ್ ಬೀದಿಗೆ ಬಂದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಜೇಂದ್ರ ಸಿಂಗ್ ಬಾಬು
author img

By

Published : Jul 9, 2021, 9:05 PM IST

ಬೆಂಗಳೂರು: 85 ವರ್ಷ ಇತಿಹಾಸವಿರುವ ಕನ್ನಡ ಚಿತ್ರರಂಗ ಈಗ ಪರಭಾಷೆಯ ಸಿನಿಮಾ, ಇಂಡಸ್ಟ್ರಿಗೆ ಪೈಪೋಟಿ ಕೊಡುವಷ್ಟು ಮಟ್ಟಿಗೆ ಬೆಳೆದು ನಿಂತಿದೆ. ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳೋದಕ್ಕೆ ಕಾರಣ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಸಿನಿಮಾಗಳು.

ಹೌದು, ಬಿಗ್ ಬಜೆಟ್ ಸಿನಿಮಾಗಳ ಹಿಂದೆ ನಿರ್ದೇಶಕ ಎಂಬ ಮಾಂತ್ರಿಕನ ಕೈಚಳಕವಿರುತ್ತದೆ‌. ಇಂತಹ ನಿರ್ದೇಶಕರನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಭಗವಾನ್, ಗಿರೀಶ್ ಕಾಸರವಳ್ಳಿ ಹಾಗು ರಾಜೇಂದ್ರ ಸಿಂಗ್ ಬಾಬು 1984ರಲ್ಲಿ ‌ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘವನ್ನು ಕಟ್ಟಿ ಬೆಳೆಸಿದರು.

ಡೈರೆಕ್ಟರ್ ಅಸೋಸಿಯೇಷನ್ ಬೀದಿಗೆ ಬಂದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಜೇಂದ್ರ ಸಿಂಗ್ ಬಾಬು

ಆದರೆ, ಈ ಡೈರೆಕ್ಟರ್ ಅಸೋಸಿಯೇಷನ್ ಇಂದು ಬೀದಿಗೆ ಬರುವಂತೆ ಮಾಡಿರುವ ನಿರ್ದೇಶಕರ ಬಗ್ಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕಾಲದಲ್ಲಿ ಪುಟ್ಟಣ್ಣ ಕಣಗಾಲ್, ಗಿರೀಶ್ ಕಾಸರವಳ್ಳಿ, ಸಿದ್ದಲಿಂಗಯ್ಯ, ಭಗವಾನ್,‌ ನಾನು ಸೇರಿದಂತೆ ಬೈಕ್​ನಲ್ಲಿ ಒಡಾಡಿ ನಿರ್ದೇಶಕರ ಸಂಘವನ್ನು ಕಟ್ಟಿದ್ದೇವು. ಆ ಕಾಲದಲ್ಲಿ ನಿರ್ದೇಶಕರ ಸಂಘದ ಮೇಲೆ ಡಾ. ರಾಜ್ ಕುಮಾರ್ ವಿಶೇಷ ಅಭಿಮಾನವನ್ನು ಹೊಂದಿದ್ದರು. ನಿರ್ದೇಶಕರ ಸಂಘದಲ್ಲಿ ಕೊಡುತ್ತಿದ್ದ ಪ್ರಶಸ್ತಿ ಕಾರ್ಯಕ್ರಮಕ್ಕೆ ರಾಜ್ ಕುಮಾರ್ ತಪ್ಪದೇ ಭಾಗವಹಿಸುತ್ತಿದ್ದರು. ಜೊತೆಗೆ ತಾರೆಯರಾದ, ವಿಷ್ಣುವರ್ಧನ್, ಅಂಬರೀಶ್, ಸರೋಜಾದೇವಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಬರುತ್ತಿದ್ದರು ರಾಜೇಂದ್ರ ಸಿಂಗ್ ಹಳೆ ನೆನಪುಗಳನ್ನು ಮೆಲುಕುಹಾಕಿದರು.

ಇವತ್ತು ಡೈರೆಕ್ಟರ್ ಅಸೋಸಿಯೇಷನ್ ಬೀದಿಗೆ ಬಂದಿದೆ. ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಶಂಕರ್ ಸಿಂಗ್, ವಿಠ್ಠಲ್ ರಾವ್​ ಕಟ್ಟಿ ಬೆಳೆಸಿದ ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘವನ್ನು ನಾವು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ರಾಜೇಂದ್ರ ಸಿಂಗ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.