ಭಾರತವನ್ನೇ ಹೊತ್ತಿ ಉರಿಯುವಂತೆ ಮಾಡಿದ ಸಿಎಎ ಮತ್ತು ಎನ್ಆರ್ಸಿ ಕುರಿತು ಹಲವು ಮುಖಂಡರು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದೀಗ ಬಹುಭಾಷಾ ನಟ ರಜನಿಕಾಂತ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪೌರತ್ವ ನೋಂದಣಿ ಕಾಯಿದೆಯಿಂದ ಯಾರಿಗೂ ಏನೂ ಆಗಲ್ಲ. ಅಕಸ್ಮಾತ್ ಈ ಕಾಯ್ದೆ ಮುಸಲ್ಮಾನರ ಮೇಲೆ ದುಷ್ಪರಿಣಾಮ ಬೀರಿದರೆ, ಹೋರಾಟ ಮಾಡುವ ಮೊದಲ ವ್ಯಕ್ತಿ ನಾನೇ ಎಂದು ತಲೈವಾ ಪ್ರಕಟಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಜನಿ, ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR)ಯ ಅವಶ್ಯಕತೆ ಇದೆ. ಆದ್ರೆ NRC(ರಾಷ್ಟ್ರೀಯ ಪೌರತ್ವ ನೋಂದಣಿ)ಯನ್ನು ಜಾರಿಗೆ ತರುವ ಮುನ್ನ ಸ್ಪಷ್ಟನೆ ನೀಡಬೇಕು ಎಂದು ರಜನಿಕಾಂತ್ ಕೇಂದ್ರ ಸರ್ಕಾರವನ್ನ ಇದೇ ವೇಳೆ ಒತ್ತಾಯಿಸಿದ್ದಾರೆ.