ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ನೆಚ್ಚಿನ ನಟನ ಜೊತೆ ಒಂದು ಸೆಲ್ಪಿಗಾಗಿ ಫ್ಯಾನ್ಸ್ ಮುಗಿ ಬೀಳೋದು ಸಾಮಾನ್ಯ. ಇವತ್ತು 'ತಲೈವಾ' ಬೆಂಗಳೂರಿಗೆ ವಿವಾಹ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗಲೂ ಅದೇ ಪ್ರಸಂಗ ನಡೆಯಿತು.
ಸಹಕಾರ ನಗರದಲ್ಲಿರೋ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಜನಿ ಭಾಗಿಯಾಗಿದ್ದರು. ಕುಟುಂಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.