ETV Bharat / sitara

ಆರ್ಥಿಕ ಸಂಕಷ್ಟ : ಮನೆ, ಕಾರುಗಳನ್ನೇ ಮಾರಾಕ್ಕಿಟ್ಟ ರಾಗಿಣಿ ಪೋಷಕರು - ಡ್ರಗ್​ ಕೇಸ್​​ನಲ್ಲಿ ಜೈಲು ಸೇರಿರುವ ರಾಗಿಣಿ

ಹೈಕೋರ್ಟ್​​​ನಲ್ಲಿ ರಾಗಿಣಿ ಜಾಮೀನು ಅರ್ಜಿ ವಜಾ ಆದ ಕಾರಣ ಕಾನೂನು ಹೋರಾಟ ನಡೆಸಲು ರಾಗಿಣಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆ ಮತ್ತು ಕಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

Ragini parents who sell houses and cars
ಆರ್ಥಿಕ ಸಂಕಷ್ಟ : ಮನೆ, ಕಾರುಗಳನ್ನೇ ಮಾರಾಕ್ಕಿಟ್ಟ ರಾಗಿಣಿ ಪೋಷಕರು
author img

By

Published : Nov 12, 2020, 3:55 PM IST

Updated : Nov 12, 2020, 4:25 PM IST

ಬೆಂಗಳೂರು: ಡ್ರಗ್​ ಮಾಫಿಯಾ ಕೇಸ್​​ನಲ್ಲಿ ಸಿಲುಕಿ ಜೈಲು ಸೇರಿರುವ ನಟಿ ರಾಗಿಣಿ ಕುಟುಂಬಕ್ಕೆ ಇದೀಗ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕುಟುಂಬಸ್ಥರು ತಮ್ಮ ಮನೆ ಹಾಗೂ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ನಟಿ ರಾಗಿಣಿ ಪೋಷಕರು ಈ ಹಿಂದೆ ತಮ್ಮ ಮನೆಯನ್ನೇ ಸೇಲ್​​ ಮಾಡಲು ಹೊರಟಿದ್ದು, ಆ ಮನೆಯನ್ನು ಯಾರೂ ಖರೀದಿ ಮಾಡದ ಕಾರಣ ತಮ್ಮ ಕಾರುಗಳನ್ನು ಮಾರಲು ಮುಂದಾಗಿದ್ದಾರೆ.

Ragini parents who sell houses and cars
ಮನೆ, ಕಾರುಗಳನ್ನೇ ಮಾರಾಕ್ಕಿಟ್ಟ ರಾಗಿಣಿ ಪೋಷಕರು

ಹೈಕೋರ್ಟ್​​​ನಲ್ಲಿ ರಾಗಿಣಿ ಜಾಮೀನು ಅರ್ಜಿ ವಜಾ ಆದ ಕಾರಣ ಕಾನೂನು ಹೋರಾಟ ನಡೆಸಲು ರಾಗಿಣಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಸದ್ಯ ರಾಗಿಣಿ ತಾಯಿ ರೋಹಿಣಿ ದ್ವೀವೆದಿ ಹೆಸರಿನಲ್ಲಿರುವ ಇನ್ನೋವಾ ಸೇರಿದಂತೆ ಎರಡು ಕಾರುಗಳನ್ನು ಮಾರಾಟಕ್ಕೆ‌ ಇಟ್ಟಿದ್ದಾರೆ.‌ ಮಾರಾಟದಿಂದ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವ ಇರಾದೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ‌.

ಯಲಹಂಕದಲ್ಲಿರುವ ತಮ್ಮ ಪ್ಲಾಟ್​​ ಅನ್ನ ಮಾರಾಟ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದ್ರೆ ಅದನ್ನು ಯಾರೂ ಖರೀದಿ ಮಾಡದ ಕಾರಣ ತಮ್ಮ ಮನೆಯಲ್ಲಿದ್ದ, ಇನ್ನೋವಾ ಮತ್ತು SX4 ಕಾರುಗಳನ್ನು ಸೇಲ್​​ಗಿಟ್ಟಿದ್ದಾರೆ. ಇನ್ನೋವಾ ಕಾರಿಗೆ 9 ಲಕ್ಷ ಹಾಗೂ SX4 ಕಾರಿಗೆ 3 ಲಕ್ಷ ನಿಗದಿಪಡಿಸಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾರೆ.

Last Updated : Nov 12, 2020, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.