ETV Bharat / sitara

ಕಿಡಿಗೇಡಿಗಳ ವಿರುದ್ಧ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ ರಾಧಿಕ ಕುಮಾರಸ್ವಾಮಿ

author img

By

Published : Sep 1, 2020, 2:45 PM IST

Updated : Sep 1, 2020, 4:03 PM IST

2013 ರಲ್ಲಿ ಬಿಡುಗಡೆ ಆಗಿದ್ದ ರಾಧಿಕ ಕುಮಾರಸ್ವಾಮಿ ನಿರ್ಮಿಸಿ ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ಕೆಲವು ಕಿಡಿಗೇಡಿಗಳು ಪೈರಸಿ ಮಾಡಿದ್ದು ಈ ಸಂಬಂಧ ರಾಧಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಧಿಕ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Radhika lodged complaint about Piracy
ರಾಧಿಕ ಕುಮಾರಸ್ವಾಮಿ

ಬೆಂಗಳೂರು: 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್​​​ಗೆ ಅಪ್​​​ಲೋಡ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸ್ಯಾಂಡಲ್​​ವುಡ್ ನಟಿ ರಾಧಿಕ ಕುಮಾರಸ್ವಾಮಿ ಉತ್ತರ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

complaint copy 1
ದೂರು ಪ್ರತಿ 1

ರಾಧಿಕ ಕುಮಾರಸ್ವಾಮಿ ನಿರ್ಮಿಸಿ ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರ 2013 ರಲ್ಲಿ ತೆರೆ ಕಂಡಿತ್ತು. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕ ಜೋಡಿಯಾಗಿ ಆದಿತ್ಯ ನಟಿಸಿದ್ದರು. ಆದರೆ ಈ ಸಿನಿಮಾ ಯೂಟ್ಯೂಬ್​​​​ನಲ್ಲಿ ಲಭ್ಯವಿರಲಿಲ್ಲ. ಇದೀಗ ಕೆಲವು ಕಿಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿ ಕಾನೂನು ಬಾಹಿರವಾಗಿ ಯೂಟ್ಯೂಬ್​​​ನಲ್ಲಿ ಅಪ್​​ಲೋಡ್ ಮಾಡಿದ್ದಾರೆ.

complaint copy 2
ದೂರು ಪ್ರತಿ 2

ನಿರ್ಮಾಪಕರ ಅನುಮತಿ ಪಡೆಯದೆ ಈ ರೀತಿ ಯೂಟ್ಯೂಬ್​​​ನಲ್ಲಿ ಅಪ್​​​ಲೋಡ್ ಮಾಡಿರುವುದರಿಂದ ನಷ್ಟವಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ರಾಧಿಕ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಧಿಕ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಸದ್ಯಕ್ಕೆ ರಾಧಿಕ ನೀಡಿರುವ ದೂರಿನ ಹಿನ್ನೆಲೆ ಉತ್ತರ ವಿಭಾಗ ಸಿಇಎನ್​​ ಠಾಣೆಯಲ್ಲಿ ಎಫ್​​​​​ಐಆರ್​ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Last Updated : Sep 1, 2020, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.