ETV Bharat / sitara

ಬರ್ತ್​ಡೇ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ಸ್ವೀಟಿ...ಶುಭ ಕೋರಿದ ಅಭಿಮಾನಿಗಳು

author img

By

Published : Nov 12, 2020, 9:43 AM IST

14ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದು ಸ್ಟಾರ್​ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ಸ್ವೀಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Radhika kumarswamy Birthday
ರಾಧಿಕಾ ಕುಮಾರಸ್ವಾಮಿ

ಸ್ಯಾಂಡಲ್​​ವುಡ್​ ಸ್ವೀಟಿ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ರಾಧಿಕಾ ಕುಮಾರಸ್ವಾಮಿಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ರಾಧಿಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಆರಂಭಿಸಿದ್ದಾರೆ. ರಾಧಿಕಾ ಈ ಬಾರಿ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Radhika kumarswamy Birthday
34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ

12 ನವೆಂಬರ್​ 1986 ರಲ್ಲಿ ಮಂಗಳೂರಿನಲ್ಲಿ ಜನಿಸಿದ ರಾಧಿಕಾ, ಬಾಲ್ಯದಲ್ಲೇ ಬಹಳ ಕಷ್ಟಗಳನ್ನು ಕಂಡವರು. 9 ನೇ ತರಗತಿ ಮುಗಿಯುತ್ತಿದ್ದಂತೆ ಚಿತ್ರರಂಗಕ್ಕೆ ಬಂದ ಇವರು, ಸೃಜನ್ ಲೋಕೇಶ್ ಜೊತೆ 'ನೀಲಮೇಘಶ್ಯಾಮ' ಚಿತ್ರದ ಮೂಲಕ ಕರಿಯರ್ ಆರಂಭಿಸಿದರು. ಈ ಸಿನಿಮಾ ಯಶಸ್ಸಿಯಾಗದಿದ್ದರೂ ಇದರ ನಂತರ ವಿಜಯ ರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ' ಸಿನಿಮಾ ರಾಧಿಕಾಗೆ ಒಳ್ಳೆ ಹೆಸರು ತಂದುಕೊಟ್ಟಿತು.

Radhika kumarswamy Birthday
ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಚೆಲುವೆ

ನಿನಗಾಗಿ ಯಶಸ್ಸಿನ ನಂತರ ರಾಧಿಕಾಗೆ ಸಾಲು ಸಾಲು ಅವಕಾಶಗಳು ಹುಡುಕಿ ಬಂದವು. ತವರಿಗೆ ಬಾ ತಂಗಿ, ಪ್ರೇಮಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮಸಾಲಾ, ಆಟೋ ಶಂಕರ್, ಮಂಡ್ಯ, ಅನಾಥರು, ಸ್ವೀಟಿ ನನ್ನ ಜೋಡಿ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದರು. ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿ ಕೂಡಾ ರಾಧಿಕಾ ಹೆಸರು ಮಾಡಿದ್ದಾರೆ. ತಮಿಳು ಪ್ರೇಕ್ಷಕರು ರಾಧಿಕಾ ಅವರನ್ನು ಕುಟ್ಟಿ ರಾಧಿಕಾ ಎಂದು ಕರೆಯುತ್ತಾರೆ.

Radhika kumarswamy Birthday
'ದಮಯಂತಿ' ಚಿತ್ರದ ದೃಶ್ಯ

ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೂಡಾ ರಾಧಿಕಾ ಗುರುತಿಸಿಕೊಂಡಿದ್ದಾರೆ. ಯಶ್ ಹಾಗೂ ರಮ್ಯ ಅಭಿನಯದ 'ಲಕ್ಕಿ' ಹಾಗೂ ಆದಿತ್ಯ ಜೊತೆ ತಾವು ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ರಾಧಿಕಾ ನಿರ್ಮಾಣ ಮಾಡಿದ್ದಾರೆ. ರಾಧಿಕಾ ಸದ್ಯಕ್ಕೆ ರವಿಚಂದ್ರನ್​​​​ ಜೊತೆ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಸರ್ಜಾ ಜೊತೆ ಅಭಿನಯಿಸಿರುವ 'ಕಾಂಟ್ರಾಕ್ಟ್'​ ಹಾಗೂ ಅಘೋರಿಯಾಗಿ ನಟಿಸಿರುವ 'ಭೈರಾದೇವಿ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಟಿವಿ ಭಾರತದ ವತಿಯಿಂದ ರಾಧಿಕಾಗೆ ಹುಟ್ಟುಹಬ್ಬದ ಶುಭಾಶಯಗಳು.

Radhika kumarswamy Birthday
'ಕಾಂಟ್ರಾಕ್ಟ್​​' ಚಿತ್ರದಲ್ಲಿ ಅರ್ಜುನ್ ಸರ್ಜಾ, ರಾಧಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.