ಮುಂಬೈ: ಬಹುನಿರೀಕ್ಷಿತ 'ರಾಧೇಶ್ಯಾಮ್' ಸಿನಿಮಾ ಮಕರ ಸಂಕ್ರಾಂತಿ ಮತ್ತು ಪೊಂಗಲ್ ಸಂದರ್ಭದಲ್ಲಿ ಅಂದರೆ 2022ರ ಜನವರಿ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗುವುದಾಗಿ ಟಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಪ್ರಭಾಸ್ ಶುಕ್ರವಾರ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ರಾಧೇಶ್ಯಾಮ್' ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ. ನಟ ಪ್ರಭಾಸ್ ಚಿತ್ರದ ಬಿಡುಗಡೆ ದಿನಾಂಕವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಸಮೇತ ಹಂಚಿಕೊಂಡಿದ್ದಾರೆ. ನನ್ನ ರೊಮ್ಯಾಂಟಿಕ್ ಕಥೆಯನ್ನು ವೀಕ್ಷಿಸಲು ನೀವೆಲ್ಲರೂ ಕಾಯಲು ಸಾಧ್ಯವಿಲ್ಲ. ರಾಧೇಶ್ಯಾಮ್ ಚಿತ್ರ 2022ರ ಜನವರಿ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಯೂರೋಪ್ನಲ್ಲಿ 1970ರಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿದ 'ರಾಧೇಶ್ಯಾಮ್' ಚಿತ್ರವನ್ನು ಮಾಡಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಈ ಹಿಂದೆ ನಿರ್ಧರಿಸಿದಂತೆ 'ರಾಧೇಶ್ಯಾಮ್' ಸಿನಿಮಾ ಇಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ಬಿಡುಗಡೆ ದಿನಾಂಕವನ್ನು 2022ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಸಂಜಯ್ ದತ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗದ ಅಧೀರನ ಟೀಸರ್: ಕಾರಣ!