ETV Bharat / sitara

ರಾಧೆ-ಶ್ಯಾಮ್ ಚಿತ್ರದ ಎರಡನೇ ಟ್ರೇಲರ್​ ಬಿಡುಗಡೆ; ಕುತೂಹಲ ಹೆಚ್ಚಿಸಿದ 10 ಸಂಗತಿಗಳು - ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ

ಪ್ರಕೃತಿಯ ಅಡೆ-ತಡೆ ನಡುವೆ ಚಿತ್ರದ ನಾಯಕ ಮತ್ತು ನಾಯಕಿ ಹೇಗೆ ಒಂದಾಗಲಿದ್ದಾರೆ ಅನ್ನೋದನ್ನು ರಾಧೆ ಶ್ಯಾಮ್ ಟ್ರೇಲರ್​ನಲ್ಲಿ ಕೇಂದ್ರೀಕರಿಸಲಾಗಿದೆ. ಖಳನಟರ ರೌದ್ರಾವತಾರ ಬಹುತೇಕ ಕಡಿಮೆ ಎಂಬುದನ್ನೂ ಸಹ ಹೇಳಿಕೊಟ್ಟಂತಿದೆ.

Radhe Shyam 2nd Trailer Release Date Revealed

author img

By

Published : Mar 2, 2022, 6:37 PM IST

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಮೊದಲು ಟ್ರೇಲರ್ ರಿಲೀಸ್ ಮಾಡಿದ್ದ ಚಿತ್ರದ ನಿರ್ಮಾಪಕರು ಇಂದು (ಬುಧವಾರ) ಎರಡನೇ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ.

1.04 ನಿಮಿಷಗಳ ಟ್ರೇಲರ್ ಇದಾಗಿದ್ದು, ಅಲ್ಪ ಅವಧಿಯಲ್ಲೇ 10 ಹಲವು ಕುತೂಹಲಕಾರಿ ಸಂಗತಿಯನ್ನು ಈ ಟ್ರೇಲರ್ ಹೊತ್ತುತಂದಿದೆ. ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿರುವ ನಿರ್ಮಾಪಕರು ಮೇಲಿಂದ ಮೇಲೆ ಎರಡು ಟ್ರೇಲರ್ ಬಿಡುಗಡೆ ಮಾಡಿ ಅಭಿರುಚಿ ಹೆಚ್ಚಿಸಿದ್ದಾರೆ.

ಪ್ರಕೃತಿಯ ಅಡೆ-ತಡೆ ನಡುವೆ ಚಿತ್ರದ ನಾಯಕ ಮತ್ತು ನಾಯಕಿ ಹೇಗೆ ಒಂದಾಗಲಿದ್ದಾರೆ ಅನ್ನೋದನ್ನು ಈ ಟ್ರೇಲರ್​ನಲ್ಲಿ ಕೇಂದ್ರೀಕರಿಸಲಾಗಿದೆ. ಖಳನಟರ ರೌದ್ರಾವತಾರ ಬಹುತೇಕ ಕಡಿಮೆ ಎಂಬುದನ್ನೂ ಸಹ ಹೇಳಿಕೊಟ್ಟಂತಿದೆ.

  • " class="align-text-top noRightClick twitterSection" data="">

ಚಿತ್ರದ ನಾಯಕ-ನಾಯಕಿ ಭೇಟಿಗೆ ಎದುರಾಗುವ ಪ್ರಕೃತಿಯ ವಿಕೋಪ ಮತ್ತು ಸುನಾಮಿ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರ ದುರಂತ ಅಂತ್ಯ ಕಾಣಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಾಧೆ ಶ್ಯಾಮ್ ಚಿತ್ರವು ಬರುವ ಮಾರ್ಚ್ 11 ರಂದು ಕನ್ನಡ ಸೇರಿ ಹಲವು ಭಾಷೆಯಲ್ಲಿ ಬಿಡುಗಡೆಯಾಲಿದೆ.

ಯೂರೋಪ್​​ನಲ್ಲಿ 1970ರಲ್ಲಿ ನಡೆದ ಪ್ರೇಮ ಕಥೆಯೊಂದನ್ನು ಆಧರಿಸಿ ಈ ರಾಧೆ ಶ್ಯಾಮ್ ಚಿತ್ರ ಮೂಡಿಬರಲಿದ್ದು, ಪ್ರಭಾಸ್​ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ನಿರ್ದೇಶನವಿದೆ. ಇದರಲ್ಲಿ ಪ್ರಭಾಸ್ ಹಸ್ತಸಾಮುದ್ರಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರೀಕರಣವನ್ನು ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್‌ನಲ್ಲಿ ಮಾಡಲಾಗಿದೆ. ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಾಧೆ ಶ್ಯಾಮ್ ಬಿಡುಗಡೆಯಾಗಲಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.