ETV Bharat / sitara

ಪುನೀತ್, ಶ್ರೀಮುರಳಿ ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ ಶ್ರೀನಿವಾಸ್ ನಿಧನ - makeup man death news

ಕಳೆದ 30ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಕಲಾವಿದರಿಗೆ ಮೇಕಪ್​ ಮ್ಯಾನ್​ ಆಗಿದ್ದ ಸೀನಣ್ಣ ಅಲಿಯಾಸ್​ ಶ್ರೀನಿವಾಸ ಸಾವನ್ನಪ್ಪಿದ್ದಾರೆ.

srinivas
srinivas
author img

By

Published : Apr 28, 2021, 7:05 PM IST

ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಸೀನಣ್ಣ ಅಂತಾ ಫೇಮಸ್ ಆಗಿದ್ದ, ಶ್ರೀನಿವಾಸ್ ಇಂದು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್‌ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರಗೊಂಡ ಪರಿಣಾಮ ಇಂದು ಬೆಳಗ್ಗೆ ಮೇಕಪ್ ಸೀನಣ್ಣ ಕೊನೆಯುಸಿರೆಳೆದಿದ್ದಾರೆ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದನಾಗಿ ಶ್ರೀನಿವಾಸ್ , ಬಹದ್ದೂರ್, ಭರಾಟೆ ಸಿನಿಮಾಗಳ ನಿರ್ದೇಶಕ ಹೇಳುವ ಹಾಗೇ, ಧ್ರುವ ಸರ್ಜಾ ಅಭಿನಯದ ಬಹದ್ದೂರ್' ಹಾಗೂ ಭರ್ಜರಿ, ಶ್ರೀಮುರಳಿ ಅಭಿನಯದ ಭರಾಟೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸುತ್ತಿರುವ ಜೇಮ್ಸ್ ಸೇರಿದಂತೆ ಹಲವು ಚಿತ್ರಗಳಿಗೆ ಕಂಪೆನಿ ಮೇಕಪ್ ಮ್ಯಾನ್‌ ಆಗಿ ಶ್ರೀನಿವಾಸ್ ಕಾರ್ಯನಿರ್ವಹಿಸಿದ್ದಾರಂತೆ.

ಹಾಗೇ ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಯುವ ನಿರ್ದೇಶಕರ ಸಿನಿಮಾಗಳಲ್ಲಿ ಮೇಕಪ್ ಸೀನಣ್ಣ ಕೆಲಸ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ, ಹಲವು ಕಲಾವಿದರಿಗೆ ಮೇಕಪ್ ಮ್ಯಾನ್ ಕೆಲಸ ಮಾಡಿದ್ದಾರೆ. ಸದ್ಯ ಮೇಕಪ್ ಶ್ರೀನಿವಾಸ್ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷರಾಗಿದ್ದರು. ಹೀಗಾಗಿ ನಿರ್ದೇಶಕ ಚೇತನ್ ಕುಮಾರ್ , ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸೀನಣ್ಣ ಅದ್ಭುತ ಜೀವಿ. ತುಂಬಾ ಒಳ್ಳೆಯ ಮನುಷ್ಯ. ಅವರಿಂದ ಯಾರಿಗೂ ತೊಂದರೆ ಅನ್ನೋದೇ ಆಗಿಲ್ಲ. ಅವರ ನಿಧನದ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಹದ್ದೂರ್' ನಿರ್ದೇಶಕ ಚೇತನ್ ಕಂಬನಿ ಮಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.