ETV Bharat / sitara

ಪಿಆರ್​ಕೆ ಚೊಚ್ಚಲ ಚಿತ್ರವೇ ಸೂಪರ್ ಹಿಟ್​....ಕವಲು ದಾರಿಗೆ 50ರ ಸಂಭ್ರಮ - undefined

'ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಕವಲುದಾರಿ ಸಿನಿಮಾ ಅಮೋಘವಾಗಿ 50 ನೇ ಪ್ರದರ್ಶನ ಕಾಣುತ್ತಿದೆ.

ಕವಲು ದಾರಿ
author img

By

Published : Jun 3, 2019, 11:13 AM IST

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ನಿರ್ಮಾಣದ ಚೊಚ್ಚಲ ಸಿನಿಮಾ ‘ಕವಲು ದಾರಿ’ 50ನೇ ದಿವಸಕ್ಕೆ ಕಾಲಿಟ್ಟಿದೆ. ಏಪ್ರಿಲ್ 12 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರಾರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ಮಾರುಕಟ್ಟೆ ಹಾಗೂ ಡಿಜಿಟಲ್ ಪ್ಲಾಟ್​ಫಾರ್ಮ್​ ಲಭ್ಯವಾಗಿತ್ತು. ಸದ್ಯ ವೀರೇಶ್ ಮಿನಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್​​ಲ್ಲಿ ಈ ಚಿತ್ರ ಪ್ರದರ್ಶನ 50 ದಿನ ದಾಟಿ ಮುಂದುವರೆದಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಂತರ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಇದರಿಂದ ಎರಡನೇ ಗೆಲುವು ಸಂದಂತಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ನಟ ಅನಂತ್ ನಾಗ್ ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಧೀರಜ್ ಫಿಲಂಸ್​ ಚಿತ್ರ ತಂಡವು ಈ ಚಿತ್ರವನ್ನು ಬಿಡುಗಡೆ ಮಾಡಿತ್ತು.

ಕ್ರೈಂ ಥ್ರಿಲ್ಲರ್ ಕಥಾ ವಸ್ತುವಿನ ಈ ಚಿತ್ರದಲ್ಲಿ ರಿಷಿ, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ರೋಷಿಣಿ ಪ್ರಕಾಶ್​ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಅದ್ವೈತ ಗುರುಮೂರ್ತಿ ಕ್ಯಾಮರಾ ಚಾಲನೆ ಮಾಡಿದ್ದು, ಜಗದೀಶ್ ಸಂಕಲನ ನಿರ್ವಹಣೆ ಹಾಗೂ ರವಿ ವರ್ಮಾ ಸಾಹಸ ನಿರ್ವಹಣೆ ಮಾಡಿದ್ದಾರೆ.

ಇನ್ನು ಪಿಆರ್​​​ಕೆ ಬ್ಯಾನರ್​ನ​​ಡಿಯಲ್ಲಿ 'ಕವಲು ದಾರಿ' ಬಳಿಕ ‘ಲಾ’ ಹಾಗೂ ‘ಮಾಯಾಬಜಾರ್’ ಎಂಬೆರಡು ಸಿನಿಮಾಗಳು ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಮೂಡಿಬರಲಿವೆ.

ಪುನೀತ್ ರಾಜಕುಮಾರ್ ನಿರ್ಮಾಣದ ಕವಲು ದಾರಿ 50ಕ್ಕೆ ಕಾಲಿಟ್ಟಿತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ಮೊದಲ ಕನ್ನಡ ಸಿನಿಮಾ ಕವಲು ದಾರಿ 50ನೇ ದಿವಸಕ್ಕೆ ಕಾಲಿಟ್ಟಿದೆ. ಏಪ್ರಿಲ್ 12 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಬಿಡುಗಡೆ ಸಮಯಕ್ಕೆ ಚಿತ್ರಕ್ಕೆ ಒಳ್ಳೆಯ ಮಾರುಕಟ್ಟೆ ಸಹ ಡಿಜಿಟಲ್ ಪ್ಲಾಟ್ ಫಾರ್ಮ್ ಇಂದ ಲಭ್ಯ ಆಗಿತ್ತು. 50 ದಿವಸಗಳಲ್ಲಿ ಪ್ರದರ್ಶನ ಆಗಿ ಸಧ್ಯಕ್ಕೆ ವೀರೇಶ್ ಮಿನಿ, ಕೆಲವು ಮಲ್ಟಿಪ್ಲೆಕ್ಸ್ ಪರದೆಯಲ್ಲಿ ಕವಲು ದಾರಿ ಪ್ರದರ್ಶನ ಮುಂದುವರೆಸಿದೆ.

ಗೋದಿ ಬಣ್ಣ ಸಾದರಣ ಮೈಕಟ್ಟು ಸಿನಿಮಾ ನಂತರ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಇದು ಎರಡನೇ ಗೆಲವು. ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ನಟ ಅನಂತ್ ನಾಗ್ ಸಹ ಹೇಮಂತ್ ರಾವ್ ಈ ಸಿನಿಮಾ ಕವಲು ದಾರಿ ಅಲ್ಲಿ ಇಟ್ಟುಕೊಂಡಿದ್ದಾರೆ. ಧೀರಜ್ ಫಿಲ್ಮ್ಸ್ ಈ ಚಿತ್ರವನ್ನೂ ಬಿಡುಗಡೆ ಮಾಡಿತ್ತು.

ಕ್ರೈಂ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರದಲ್ಲಿ ರಿಷಿ, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ರೋಷಿಣಿ ಪ್ರಕಾಷ್ ಮುಖ್ಯ ತಾರಗಣದ ಸಿನಿಮಾಕ್ಕೆ ಅದ್ವೈತ ಗುರುಮೂರ್ತಿ ಕ್ಯಾಮರಾ ಚಾಲನೆ ಮಾಡಿದ್ದಾರೆ, ಜಗದೀಶ್ ಸಂಕಲನ, ಡಾ ರವಿ ವರ್ಮಾ ಸಾಹಸ ನಿರ್ವಹಿಸಿದ್ದಾರೆ.

ಪಿ ಆರ್ ಕೆ ಬ್ಯಾನ್ನರ್ ಅಡಿಯಲ್ಲಿ ಇನ್ನೆರಡು ಸಿನಿಮಗಳು ಲಾ ಹಾಗೂ ಮಾಯಾಬಜಾರ್ ಈಗ ಸಿದ್ದವಾಗುತ್ತಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.